ಭಟ್ಕಳ : ಇಲ್ಲಿನ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಮತ್ತು ಹೊಸ ವಿದ್ಯಾರ್ಥಿಗಳ ಸ್ವಾಗತ ಕೋರುವ “ಸಮಾಗಮ (samaagama)-೨೦೨೪” ಎನ್ನುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸಮಾಗಮ (samaagama) ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಿನ ತೆರ್ನಮಕ್ಕಿಯ ಕರ್ನಾಟಕ ಪಬ್ಲಿಕ ಶಾಲೆಯ ಗಣಿತ ಶಿಕ್ಷಕ ಮಾದೇವ ಗದ್ದೆಮನೆ ಮಾತನಾಡಿ, ವಿದ್ಯಾರ್ಥಿಗಳು ಸುರಕ್ಷಿತ ವಲಯ (comfort zone) ದಿಂದ ಹೊರಗಡೆ ಬಂದಾಗ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಇದನ್ನೂ ಓದಿ : ಜುಲೈ ೨೪ರಂದು ವಿವಿಧೆಡೆ ಅಡಿಕೆ ಧಾರಣೆ
ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ರಮೇಶ ಖಾರ್ವಿ ಮಾತನಾಡುತ್ತಾ, ವಿದ್ಯಾರ್ಥಿಗಳು ಶಿಕ್ಷಣದಿಂದ ಸಂಸ್ಕಾರ ಮತ್ತು ಸಂಸ್ಕಾರದಿಂದ ಧನಾತ್ಮಕ ವರ್ತನೆಯನ್ನು ಹೊಂದಬೇಕು ಎಂದು ಹೇಳಿದರು.
ವಿಡಿಯೋ ಸಹಿತ ಇದನ್ನೂ ಓದಿ : ಹೊಂಡಮಯ ರಸ್ತೆಗೆ ಮಳೆಯಲ್ಲಿ ಕಳಪೆ ತೇಪೆ; ಆಕ್ರೋಶ
ಪ್ರಾಂಶುಪಾಲ ವಿರೇಂದ್ರ ವಿ. ಶ್ಯಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಶ್ರೀರಕ್ಷಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಧನ್ಯಶ್ರೀ ನಾಯ್ಕ ಸ್ವಾಗತಿಸಿದರು, ಕ್ಷಿತಿ ಜೈನ್ ವಂದಿಸಿದರು, ಅಂಕಿತಾ ಕಾಮತ, ತೇಜಸ್ ನಾಯ್ಕ, ಮೇಘರಾಜ ನಾಯ್ಕ, ಮಂಜೂಷಾ ಕೇಶಕಾಮತ, ಯುವರಾಜ ನಾಯ್ಕ, ದೇಶಿಕ ನಾಯ್ಕ, ಅಶ್ವಿನಿ ಕಡ್ಲೆ, ಕಾಂಚನಾ ಮತ್ತು ಪಲ್ಲವಿ ನಿರೂಪಿಸಿದರು.
ಇದನ್ನೂ ಓದಿ : ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯಕ್ಕೆ ಹೊರೆ ಕಾಣಿಕೆ ಸಮರ್ಪಣೆ
ಕೊನೆಯಲ್ಲಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.