ಉಡುಪಿ : ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಸಮಯ ಪ್ರಜ್ಞೆಯಿಂದ ಸಂಭವನೀಯ ರೈಲು ಅಪಘಾತವೊಂದು ಕೂದಲೆಳೆಯಲ್ಲಿ ತಪ್ಪಿದ (missed train disaster) ಘಟನೆ ಬಾರ್ಕೂರು-ಉಡುಪಿ ಮಧ್ಯೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಬಾರ್ಕೂರು-ಉಡುಪಿ ಸೆಕ್ಷನ್ ಮಧ್ಯೆ ರೈಲು ಸಂಖ್ಯೆ ೧೨೬೧೯ ಮತ್ರ್ಯಗಂಧ ಎಕ್ಸ್‌ಪ್ರೆಸ್ ಚಲಿಸುತ್ತಿತ್ತು. ಆಗ ಹಳಿಗೆ ಅಡ್ಡಲಾಗಿ ದೊಡ್ಡ ಮರವೊಂದು ಬಿದ್ದಿರುವುದನ್ನು ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಗಮನಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಅವರು ತುರ್ತು ಬ್ರೇಕ್ ಹಾಕಿದರು. ಪರಿಣಾಮವಾಗಿ ಲೊಕೊಮೊಟಿವ್ ಮತ್ತು ಒಂದು ಕೋಚ್ ಹಾದುಹೋಗುವಷ್ಟರಲ್ಲಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮವಾಗಿ ಸಂಭಾವ್ಯ ರೈಲು ದುರಂತವೊಂದು ತಪ್ಪಿತು(missed train disaster).
ಇದನ್ನೂ ಓದಿ : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಹೊಸಬರಿಗೆ ಸ್ವಾಗತ
ಇದಾದ ನಂತರ ಹಳಿಯಲ್ಲಿ ಬಿದ್ದ ಮರವನ್ನು ಓವರ್‌ಹೆಡ್ ಉಪಕರಣ (OHE) ತಂಡವು ತೆರವುಗೊಳಿಸಿದೆ. ಬಳಿಕ ರೈಲು ಪ್ರಯಾಣ ಪುನರಾರಂಭಗೊಂಡಿದೆ.
ಇದನ್ನೂ ಓದಿ : ಜುಲೈ ೨೪ರಂದು ವಿವಿಧೆಡೆ ಅಡಿಕೆ ಧಾರಣೆ
ಭಟ್ಕಳದ ಮಂಜುನಾಥ ನಾಯ್ಕ
ಲೊಕೊ ಪೈಲಟ್ ಪುರುಷೋತ್ತಮ ಮತ್ತು ಸಹಾಯಕ ಲೊಕೊ ಪೈಲಟ್ ಮಂಜುನಾಥ ನಾಯ್ಕ ಸಮಯ ಪ್ರಜ್ಞೆ ಮೆರೆದವರು. ಮಂಜುನಾಥ ನಾಯ್ಕ ಭಟ್ಕಳ ತಾಲೂಕಿನ ಶಿರಾಲಿಯ ಬಡ್ಡುಕುಳಿ ನಿವಾಸಿ. ಸಮಯ ಪ್ರಜ್ಞೆ ಮೆರೆದು ಪ್ರಯಾಣಿಕರ ಪ್ರಾಣ ಉಳಿಸಿದ ಇಬ್ಬರೂ ಸಿಬ್ಬಂದಿಗೆ ಕೊಂಕಣ ರೈಲ್ವೆ ನಗದು ಬಹುಮಾನ ಘೋಷಿಸಿದೆ. ಸಂಭಾವ್ಯ ಭಾರಿ ಅನಾಹುತವನ್ನು ತಪ್ಪಿಸಿದ ವೃತ್ತಿಪರತೆಯನ್ನು ಗುರುತಿಸಿ, ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಸಿಎಂಡಿ ಸಂತೋಷ್ ಕುಮಾರ್ ಝಾ ಸಿಬ್ಬಂದಿಗೆ ತಲಾ ೧೫ ಸಾ.ರೂ. ನಗದು ಬಹುಮಾನ ಘೋಷಿಸಿದ್ದಾರೆ. ಸಂಭವನೀಯ ಅನಾಹುತ ತಪ್ಪಿಸಿದವರಲ್ಲಿ ಭಟ್ಕಳದವರೂ ಓರ್ವರು ಎಂಬುದು ಹೆಮ್ಮೆಯ ವಿಷಯ.