ಭಟ್ಕಳ: ಇಲ್ಲಿನ ಮುಠ್ಠಳ್ಳಿ ಗ್ರಾಮದ ಶ್ರೀ ಕಟ್ಟೆವೀರ ಮತ್ತು ಪರಿವಾರ ದೇವರ ೨೨ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಕಾರ್ಯಕ್ರಮವು ಮಂಗಳವಾರ ಭಕ್ತರ ಹರ್ಷೋದ್ಘಾರಗಳ ನಡುವೆ ಅತಿ ವಿಜೃಂಭಣೆಯಿಂದ ನೆರವೇರಿತು.
ಬೆಳಿಗ್ಗೆಯಿಂದಲೇ ಶ್ರೀ ಕಟ್ಟೆವೀರ ದೇವರಿಗೆ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆಯಿತು. ಬೆಳಿಗ್ಗೆ 8.3೦ಕ್ಕೆ ದಾಸಿಮನೆ ಕುಟುಂಬದ ಲಕ್ಷ್ಮಣ ಜಟ್ಟಪ್ಪ ನಾಯ್ಕರಿಂದ ಶ್ರೀ ದೇವರಿಗೆ ಬೆಳ್ಳಿಕವಚ ಸಮರ್ಪಣೆ ಮಾಡಲಾಯಿತು. ಮಧ್ಯಾಹ್ನ ಎಲ್ಲಾ ಕಾರ್ಯಕ್ರಮದ ಬಳಿಕ ಶ್ರೀ ಕಟ್ಟೆವೀರ ದೇವರಿಗೆ ಹಾಗೂ ಪರಿವಾರ ದೇವರಿಗೆ ಮಹಾಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇವರ ಪ್ರಸಾದ ಭೋಜನ ಸ್ವೀಕರಿಸಿದರು. ಲಕ್ಷ್ಮಣ ಜಟ್ಟಪ್ಪ ನಾಯ್ಕ ಕುಟುಂಬದ ವತಿಯಿಂದ ದೇವಸ್ಥಾನದ ಅರ್ಚಕರು, ಬೆಳ್ಳಿಕವಚವನ್ನು ನಿರ್ಮಿಸಿದ ಅಕ್ಕಸಾಲಿಗರು ಮತ್ತು ಅಡುಗೆ ಭಟ್ಟರಿಗೆ ಗೌರವಿಸಲಾಯಿತು.
ವಿಡಿಯೋ ನೋಡಿ: https://fb.watch/q39RAeR4rC/?mibextid=Nif5oz
ಇದನ್ನೂ ಓದಿ: ಗಂಟಲಲ್ಲಿದ್ದ ಮೀನು ತೆಗೆದು 11 ತಿಂಗಳ ಮಗುವಿನ ಪ್ರಾಣ ಉಳಿಸಿದ ಸರ್ಜಿ ಆಸ್ಪತ್ರೆಯ ವೈದ್ಯರು
ಸಂಜೆ 6 ಗಂಟೆಯಿಂದ 10 ಗಂಟೆಯವರೆಗೆ ಇಲ್ಲಿನ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಮತ್ತು ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳು ಎಲ್ಲರ ಮನಸೆಳೆಯಿತು. ಸರ್ಪನಕಟ್ಟೆ ಕಲಾವಿದರಿಂದ ಹಾಸ್ಯಮಯ ಸಾಮಾಜಿಕ ನಗೆನಾಟಕ ” ಹೋಯ್, ಬನ್ನಿ ” ಹಾಸ್ಯಮಯ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಈ ಸಂದರ್ಭದಲ್ಲಿ ಶ್ರೀ ಕಟ್ಟೆವೀರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಇದ್ದರು.