ಬೆಳಗಾವಿ : ಧಾರಾಕಾರ ಮಳೆಯಿಂದ ಮನೆಗೆ ನೀರು ನುಗ್ಗಿದ ಪರಿಣಾಮ ವೃದ್ಧೆ ಕಾಲು ಜಾರಿ ಬಿದ್ದು ಮೃತಪಟ್ಟ(old woman died) ಘಟನೆ ಬೆಳಗಾವಿಯ ಅಮಾನ್ ನಗರದಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮೆಹಬೂಬಿ ಅದಂ ಸಾಹೇಬ ಮಕಾಂದಾರ (79) ಮೃತ ದುರ್ದೈವಿ. ನಿರಂತರ ಮಳೆಯಿಂದ ಕಾಲನಿಗೆ ಡ್ರೈನೇಜ್ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿಯಾಗಿತ್ತು. ಕುಟುಂಬಸ್ಥರು ಶವ ಸಾಗಿಸಲು ತೀವ್ರ ಪರದಾಡಿದರು. ಮೊಳಕಾಲುದ್ದ ನೀರಲ್ಲೇ ಜನರು ಶವವನ್ನು ಸಾಗಿಸಲು ಪರದಾಡಿದರು. ಕೊನೆಗೆ ಸುರಿಯುತ್ತಿರುವ ಮಳೆಯಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಇದನ್ನೂ ಓದಿ : ತಡೆಗೋಡೆ ಕುಸಿದು ಬಾಲಕ ದುರ್ಮರಣ