ಭಟ್ಕಳ : ಗಡಿ ಹದ್ದುಬಸ್ತ್ ಸರ್ವೆಗೆ ಹೋದವನ ಮೇಲೆ ಹಲ್ಲೆ(attack) ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ(obstruction) ಘಟನೆ ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಭಟ್ಕಳದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಭೂಮಾಪಕ(surveyor) ಆಗಿರುವ ಅನೂಪ್ ನಾಗೇಶ ಶೆಟ್ಟಿ (೩೦) ಹಲ್ಲೆಗೊಳಗಾದವರು. ಕುಮಟಾ ಗಾಂಧಿನಗರ ಮೂಲದ ಇವರು ಕಳೆದ ಏಳು ವರ್ಷಗಳಿಂದ ಭೂಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲ್ಲೆಗೊಳಗಾದ ಇವರು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬೈಲೂರು ಗ್ರಾಮದ ತೂದಳ್ಳಿಯ ಜಯಂತ ನಾಗಪ್ಪ ಮೊಗೇರ ವಿರುದ್ಧ ದೂರು ಅನೂಪ್ ಮುರುಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ : ಮುಂದಿನ ಮೂರು ಗಂಟೆಗಳಲ್ಲಿ ಬಿರುಗಾಳಿ ಸಹಿತ ಮಳೆ

ದೂರಿನಲ್ಲೇನಿದೆ?
ಬೈಲೂರು ಗ್ರಾಮದ ಸರ್ವೆ ನಂ : ೫೩೨/೧ಅ ರಲ್ಲಿ ನಾಗಮ್ಮ ಬೋಳು ಮೊಗೇರ ಹಾಗೂ ಅದೇ ಗ್ರಾಮದ ಸರ್ವೇ ನಂ : ೫೩೨/೧ಬ ರಲ್ಲಿ ಲಲಿತಾ ತಿಮ್ಮಪ್ಪ ಮೊಗೇರ ಗಡಿ ಹದ್ದುಬಸ್ತ್ ಅಳತೆ ಮಾಡಿಕೊಡಲು ಅನೂಪ್ ಅವರನ್ನು ನೇಮಿಸಲಾಗಿತ್ತು. ಅದರಂತೆ
ಸರ್ವೇ ನಂಬರಗಳ ಪಕ್ಕದ ಜಾಗದ ಒಟ್ಟು ೧೨ ಜನರಿಗೆ ನೋಟೀಸ್ ಜಾರಿ ಮಾಡಿದ್ದರು.

ಇದನ್ನೂ ಓದಿ : ಜಿಪಂ ಮಾಜಿ ಸದಸ್ಯ ಎಂ ಎಂ ನಾಯ್ಕ ಜಾಲಿ ನಿಧನ

ಅದರಂತೆ, ನಿನ್ನೆ ಜುಲೈ ೨೬ರಂದು ಮಧ್ಯಾಹ್ನ ೨ :೩೦ ಗಂಟೆ ಸಮಯಕ್ಕೆ ಬೈಲೂರ ಗ್ರಾಮ ಸರ್ವೇ ನಂಬರ : ೫೩೨/೧ಅ ಮತ್ತು ಸರ್ವೇ ನಂಬರ : ೫೩೨/೧ಬ ಗಡಿ ಹದ್ದುಬಸ್ತ್ ಸರ್ವೇ ಕರ್ತವ್ಯಕ್ಕೆ ಹೋಗಿದ್ದರು. ನೋಟೀಸ್ ಜಾರಿ ಮಾಡಿದ ೧೨ ಜನರ ಪೈಕಿ ೩-೪ ಜನರು ಬಂದಿದ್ದರು. ಭೂಮಾಪಕ ಅನೂಪ್ ಅರ್ಜಿದಾರರ ಜೊತೆಗೆ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ತೂದಳ್ಳಿಯ ಜಯಂತ ನಾಗಪ್ಪ ಮೊಗೇರ ಮತ್ತು ಇತರರು ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.

ಇದನ್ನೂ ಓದಿ : ಕುಮಟಾದಲ್ಲಿ Target POK Run

ತನ್ನ ಮೇಲೆ ಏರಿ ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ನೀನು ಯಾರು ಇಲ್ಲಿ ಸರ್ವೇ ಮಾಡಲು ಎಂದು ಸಿಟ್ಟಿನಿಂದ ಜಯಂತ ನಾಗಪ್ಪ ಮೊಗೇರ ಹಲ್ಲೆ ನಡೆಸಿದ್ದಾರೆ. ಕೈಯಿಂದ ನನ್ನ ಎಡ ಕೆನ್ನೆಗೆ ಹೊಡೆದು, ಬಲಕೈಯನ್ನು ತಿರುವಿ ಒಳ ನೋವು ಪಡಿಸಿದ್ದಾರೆ. ಅಲ್ಲದೇ ನನ್ನ ಬಳಿ ಇದ್ದ ದಾಖಲೆಗಳನ್ನು ಹರಿದು ಬಿಸಾಕಿದ್ದಾರೆ. ಇಲ್ಲಿಂದ ಹೋಗದಿದ್ದರೆ ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿ, ನನ್ನ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ(obstruction) ಪಡಿಸಿದ್ದಾರೆ ಎಂದು ಭೂಮಾಪಕ ಅನೂಪ್ ದೂರು ನೀಡಿದ್ದಾರೆ.