ರಿಪ್ಪನಪೇಟೆ : ಕಳೆದ ೧೫ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದ ಕೊಟ್ಟಿಗೆಯೊಂದು ಕುಸಿದು, ಎಮ್ಮೆಯೊಂದು ಮೃತಪಟ್ಟಿರುವ ಘಟನೆ ರಿಪ್ಪನಪೇಟೆ(ripponpete) ಪಟ್ಟಣ ಸಮೀಪದ ಕೆರಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಿಡಿಯೋ ಸಹಿತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ರಿಪ್ಪನಪೇಟೆ(ripponpete) ಕೆರೆಹಳ್ಳಿ ಗ್ರಾಮದ ಶಿವಾಜಿ ರಾವ್ ಎಂಬುವರ ಜಾನುವಾರು ಕೊಟ್ಟಿಗೆ ಶನಿವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಭಾರಿ ಮಳೆ-ಗಾಳಿಯಿಂದ ಕುಸಿದಿದೆ. ಕೊಟ್ಟಿಗೆ ನೆಲ ಸಮವಾಗಿ ಕೊಟ್ಟಿಗೆ ಒಳಗಿದ್ದ ಮೂಕ ಪ್ರಾಣಿಗಳ ಆಕ್ರಂದನ ಮುಗಿಲುಮುಟ್ಟಿತ್ತು.
ವಿಡಿಯೋ ಸಹಿತ ಇದನ್ನೂ ಓದಿ : ಗಾಳಿ-ಮಳೆಗೆ ತೋಟ-ಮನೆ ಹಾನಿ
ಮನೆಯ ಮಾಲೀಕರು ಮನೆಯಿಂದ ಹೊರ ಬಂದು ಗಮನಿಸಿದಾಗ ಕೊಟ್ಟಿಗೆ ಸಂಪೂರ್ಣ ನೆಲಸಮವಾಗಿತ್ತು. ತಕ್ಷಣ ಗ್ರಾಮಸ್ಥರ ಸಹಕಾರದಿಂದ ನೆಲಸಮಗೊಂಡಿದ್ದ ಕೊಟ್ಟಿಗೆಯ ಪರಿಕರಗಳನ್ನು ತೆರವುಗೊಳಿಸಿದರು. ಕೊಟ್ಟಿಗೆಯಲ್ಲಿದ್ದ ಎಂಟು ಎಮ್ಮೆಗಳಲ್ಲಿ ಒಂದು ಎಮ್ಮೆ ಮೃತಪಟ್ಟಿದೆ. ಉಳಿದ ಎಮ್ಮೆಗಳನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಎರಡು ಎಮ್ಮೆಗಳಿಗೆ ಗಂಭೀರ ಗಾಯವಾಗಿದೆ. ಉಳಿದ ಎಮ್ಮೆಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ : ಮುರಿದು ಬೀಳುವ ಹಂತದಲ್ಲಿ ಮರಗಳು