ಹೊನ್ನಾವರ : ಕಳೆದ ೨೪ ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಕುಸಿದಿದೆ. ಶರಾವತಿ ನದಿ(Sharavathi River) ಸೇರಿದಂತೆ ಭೋರ್ಗರೆಯುತ್ತಿದ್ದ ನದಿಗಳು ಶಾಂತವಾಗಿವೆ. ಪರಿಣಾಮ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿವೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಲಿಂಗನಮಕ್ಕಿ ಜಲಾಶಯದಲ್ಲಿ ಒಳಹರಿವು ಕಡಿಮೆಯಾಗಿರುವುದು ಶರಾವತಿ ನದಿ(Sharavathi River) ಪಾತ್ರದಲ್ಲಿರುವ ಗ್ರಾಮಗಳ ಜನರು ತುಸು ನಿಟ್ಟುಸಿರು ಬಿಡುವಂತಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ (ಕೆಪಿಸಿ) ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುವ ಬಗ್ಗೆ ಎರಡು ನೋಟಿಸ್‌ ಜಾರಿ ಮಾಡಿ ಮುನ್ನೆಚ್ಚರಿಕೆ ನೀಡಿತ್ತು.

ಇದನ್ನೂ ಓದಿ : ವಿಶ್ವ ಮಟ್ಟದ ಚೆಸ್ ನಲ್ಲಿ ಬೆಳ್ಳಿ ಗೆದ್ದ ಸಮರ್ಥ ರಾವ್

ಲಿಂಗನಮಕ್ಕಿಯಲ್ಲಿ ನಿನ್ನೆ ಶನಿವಾರ ಬೆಳಿಗ್ಗೆ ೭೪೫೧೪ ಕ್ಯೂಸೆಕ್‌  ಒಳಹರಿವಿತ್ತು. ಇಂದು ಬೆಳಿಗ್ಗೆ ಕೇವಲ ೩೭೭೩೩ ಕ್ಯೂಸೆಕ್ ನೀರು ಒಳಹರಿವಿದೆ. ೧೮೧೯ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ೧೮೦೮.೫ ಅಡಿ ನೀರು ಸಂಗ್ರಹವಿದೆ. ನಿನ್ನೆಗಿಂತ ೧.೦೫ ಅಡಿ ಹೆಚ್ಚು ನೀರು ಸಂಗ್ರಹವಾಗಿದೆ. ೧೫೧.೬೪ ಟಿಎಂಸಿ ನೀರು ಸಂಗ್ರಹದ ಜಲಾಶಯದಲ್ಲಿ ಸದ್ಯ ೧೧೭.೪೫ ಟಿಎಂಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ :  ಬಿಜೆಪಿ ಪೋಸ್ಟ್ ನೋಡಿ ಸಚಿವ ಮಂಕಾಳ ವೈದ್ಯ ಗರಂ