ಭಟ್ಕಳ : ನಗರದ ತಾಲೂಕು ಸರ್ಕಾರಿ ಅಸ್ಪತ್ರೆಗೆ ಹೋಗುವ ರಸ್ತೆ (hospital road) ಹೊಂಡಗುಂಡಿಗಳಾಗಿ ತಿಂಗಳುಗಳೇ ಕಳೆದರೂ ಈವರೆಗೆ ದುರಸ್ತಿಯಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಭಟ್ಕಳ ತಾಲೂಕು ಸರಕಾರಿ ಆಸ್ಪತ್ರೆಯ ರಸ್ತೆ (hospital road) ಸಂಪೂರ್ಣ ಹಾಳಾಗಿದೆ.  ದೊಡ್ಡ ಹೊಂಡಗಳು ಬಿದ್ದಿವೆ.  ಈ ರಸ್ತೆಯಲ್ಲಿರುವ ಗುಂಡಿಗಳನ್ನು ಆದಷ್ಟು ಬೇಗ ಮುಚ್ಚಬೇಕು ಎಂಬ ಆಗ್ರಹ ಕೇಳಿಬರುತ್ತಲೇ ಇದೆ. ಆದರೆ ಪುರಸಭೆಯಾಗಲಿ, ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಕಿಂಚಿತ್ತೂ ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆಷ್ಟೇ ಆಟೋ ಚಾಲಕರು ಮತ್ತು ಸ್ಥಳೀಯರು ಈ ರಸ್ತೆಯ ಮೇಲೆ ಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದ್ದರು. ಆ ಮೂಲಕ ಆಡಳಿತ ನಡೆಸುವವರ ಗಮನ ಸೆಳೆಯಲು ಪ್ರಯತ್ನಿಸಿದ್ದರು. ಆದರೆ ಇದು ಯಾವುದೇ ಪ್ರಯೋಜನಕ್ಕೆ ಬಂದಂತಿಲ್ಲ.

ಇದನ್ನೂ ಓದಿ : ಸರಕಾರಿ ಆಸ್ಪತ್ರೆಗೆ ತೆರಳುವ ರಸ್ತೆಗೆ ಬೇಕಿದೆ ದುರಸ್ತಿ ಭಾಗ್ಯ

ಕಳೆದೊಂದು ತಿಂಗಳು ಸುರಿದ ಅವ್ಯಾಹತ ಮಳೆಯಿಂದಾಗಿ ರಸ್ತೆ ಇನ್ನಷ್ಟು ಹಾಳಾಗಿದ್ದು, ಗುಂಡಿಗಳದ್ದೇ ಕಾರುಬಾರು ಆಗಿದೆ. ಆಸ್ಪತ್ರೆಗೆಂದು ಬರುವ ಗರ್ಭಿಣಿಯರ, ರೋಗಿಗಳ ಪಾಡಂತೂ ಹೇಳತೀರದಾಗಿದೆ. ರಸ್ತೆಯುದ್ದಕ್ಕೂ ತಗ್ಗುಗಳು ಬಿದ್ದಿರುವುದರಿಂದ ನಡೆದುಕೊಂಡು ಹೋಗುವುದೇ ದುಸ್ತರವಾಗಿದೆ. ಅಂಥದ್ದರಲ್ಲಿ ವಾಹನದ ಮೇಲೆ ಹೋಗುವುದಂತೂ ತೀರಾ ಕಷ್ಟಕರವಾಗಿದೆ.

 

ಇದನ್ನೂ ಓದಿ : ವಿಶ್ವ ಮಟ್ಟದ ಚೆಸ್ ನಲ್ಲಿ ಬೆಳ್ಳಿ ಗೆದ್ದ ಸಮರ್ಥ ರಾವ್

 

ಈಗ ಮಳೆ ಕೊಂಚ ಇಳಿದಿದೆ. ಕೊನೇ ಪಕ್ಷ ಮಳೆ ನಂತಿರುವುದನ್ನು ಗಮನಿಸಿ ರಸ್ತೆ ದುರಸ್ತಿ ಮಾಡಬೇಕು. ಮಳೆಗಾಲ ಮುಗಿದ ನಂತರ ಹೊಸದಾಗಿ ರಸ್ತೆ ಡಾಂಬರೀಕರಣ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳೀಯ ಶಾಸಕರೂ ಆಗಿರುವ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ರೋಗಿಗಳ ಕಷ್ಟ ಪರಿಹರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಇದನ್ನೂ ಓದಿ : ಬಿಜೆಪಿ ಪೋಸ್ಟ್ ನೋಡಿ ಸಚಿವ ಮಂಕಾಳ ವೈದ್ಯ ಗರಂ