ಭಟ್ಕಳ : ರಾಜ್ಯ ಬಿಜೆಪಿ ಮತ್ತು ಸಚಿವ ಮಂಕಾಳ ವೈದ್ಯರ ನಡುವೆ ಫೇಸ್‌ಬುಕ್ ನಲ್ಲಿ ಪೋಸ್ಟ್ ಕಲಹ (Post War) ಮುಂದುವರಿದಂತಿದೆ. ಫೇಸ್‌ಬುಕ್ ನಲ್ಲಿ ಸಚಿವರು ಕಾಣೆಯಾಗಿದ್ದಾರೆ ಎಂಬ ರಾಜ್ಯ ಬಿಜೆಪಿ ಪೋಸ್ಟ್ ಗೆ ಸಚಿವ ಮಂಕಾಳ ವೈದ್ಯ ಫೇಸ್‌ಬುಕ್ ನಲ್ಲೇ ರಾಜ್ಯ ಬಿಜೆಪಿಗೆ ತಿರುಗೇಟು ನೀಡಿದ್ದರು. ಇದೀಗ ಸಚಿವರು ಫೇಸ್‌ಬುಕ್ ನಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದು, ರಾಜ್ಯ ಬಿಜೆಪಿ ಆರೋಪಕ್ಕೆ ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಬಿಜೆಪಿ ಪೋಸ್ಟ್ ನೋಡಿ ಸಚಿವ ಮಂಕಾಳ ವೈದ್ಯ ಗರಂ
ಸೂತಕದ ಮನೆಯಲ್ಲಿ ಸನ್ಮಾನ ಮಾಡಿಸಿಕೊಳ್ಳುವ ಹೃದಯಹೀನ ಬಿಜೆಪಿಗರಿಗೆ ಬಡವರ ಸಂಕಷ್ಟ ಅರ್ಥವಾಗುತ್ತದೆಯೇ ? ಎಂಬ ಶೀರ್ಷಿಕೆಯಡಿ ಮೂರು ಪೋಸ್ಟರ್ ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ತಾವು ಎಷ್ಟು ಬಾರಿ ಅಂಕೋಲಾಕ್ಕೆ ಹೋಗಿದ್ದು, ಅಲ್ಲಿ ಏನೇನು ಮಾಡಿದ್ದು ಎಂಬಿತ್ಯಾದಿ ವಿಷಯಗಳ ಬಗ್ಗೆ ಫೋಟೊ ಸಹಿತ ವಿವರಣೆ ನೀಡಿದ್ದಾರೆ(Post War).
ಇದನ್ನೂ ಓದಿ : ಹದಗೆಟ್ಟ ಆಸ್ಪತ್ರೆ ರಸ್ತೆ; ತಪ್ಪದ ಗೋಳು
ಘಟನೆ ನಡೆದ ದಿನ ಜು.೧೬ರ ರಾತ್ರಿ ಸ್ಥಳದಲ್ಲೇ ನಿಂತು ಕಾರ್ಯಾಚರಣೆ, ಮರುದಿನ ಅಧಿಕಾರಿಗಳ ಸಭೆ ನಡೆಸಿದ್ದು, ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ, ನೆರೆ ಪೀಡಿತ ಉಳುವರೆ ಗ್ರಾಮಕ್ಕೆ ಭೇಟಿ, ಪರಿಹಾರ ಆದೇಶಪ್ರತಿ ವಿತರಣೆ, ಜು.೨೦ರಂದು ಘಟನಾ ಸ್ಥಳಕ್ಕೆ ಭೇಟಿ, ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ ಬಗ್ಗೆ ಫೋಟೊ ದಾಖಲಿಸಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಶರಾವತಿ ನದಿಪಾತ್ರದ ಜನರಿಗೆ ಕೊಂಚ ನಿರಾಳ
ಮಹತ್ವದ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೂ ಜಿಲ್ಲೆಗೆ ಆಗಮಿಸಿ ನೊಂದವರ ಕಣ್ಣೀರು ಒರೆಸೊ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಸಚಿವರು ಹೇಳಿಕೊಂಡಿದ್ದಾರೆ. ಜಿಲ್ಲೆಯ ಜನರು ಸಂಕಷ್ಟದಲ್ಲಿರುವಾಗ ಬಿಜೆಪಿಯವರು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುವುದು ಬಿಟ್ಟು ರಾಜಕೀಯ ಮಾಡಿ ಸುಳ್ಳನ್ನು ಹರಡುವುದು ಒಳ್ಳೆಯ ಬೆಳವಣಿಗೆ ಖಂಡಿತಾ ಅಲ್ಲ. ಈಗಾಗಲೇ ನಿಮ್ಮ ಸುಳ್ಳು ಪ್ರಚಾರ, ಸಾವಿನ ಮನೆಯಲ್ಲಿ ಬಂದು ರಾಜಕೀಯ ಮಾಡುವುದನ್ನ ನೋಡಿ ಬೇಸತ್ತು ರಾಜ್ಯದ ಜನ ನಿಮಗೆ ಸೋಲಿನ ರುಚಿ ತೋರಿಸಿದ್ದಾರೆ ಎಂದು ಸಚಿವರು ಬರೆದುಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
೧೧ ವರ್ಷದಿಂದ ಜಿಲ್ಲೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಾ ಬಂದಿದ್ದರೂ ನಿಮ್ಮ ಪಕ್ಷದ ಒಬ್ಬ ನಾಯಕರೂ ಇದರ ಬಗ್ಗೆ ಧ್ವನಿ ಎತ್ತಿಲಿಲ್ಲ ಯಾಕೆ? ಎಂದು ಪ್ರಶ್ನಿಸಿರುವ ಮಂಕಾಳ ವೈದ್ಯ, ಜನರ ಕಷ್ಟದ ಸಂದರ್ಭದಲ್ಲಿ ಪಕ್ಷಾತೀತವಾಗಿ ಅವರ ಜೊತೆ ನಿಲ್ಲಬೇಕೆ ಹೊರತು ಹೆಣದ ಮೇಲೆ ರಾಜಕೀಯ ಮಾಡುವುದು ಬಿಜೆಪಿ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದಿದ್ದಾರೆ.