ಭಟ್ಕಳ: ವಾರದ ಹಿಂದೆ ತಾಲೂಕಿನ ತಲಗೋಡ ಗ್ರಾಮದ ಗೊಂಡರಕೇರಿ ರಸ್ತೆಯಲ್ಲಿ ಗುಡ್ಡ ಕುಸಿತ(land slide) ಆಗಿದ್ದು, ಇನ್ನಷ್ಟು ಕುಸಿತದ ಭೀತಿ ಎದುರಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ವಾರದ ಹಿಂದೆ ಸುರಿದ ಭಾರಿ ಮಳೆಗೆ ರಸ್ತೆಯ ಅಂಚಿನಲ್ಲೇ ಗುಡ್ಡ ಕುಸಿತ(land slide) ಆಗಿ ಮಣ್ಣು ರಸ್ತೆ ಮೇಲೆ ಬಿದ್ದಿದೆ. ಗುಡ್ಡಕ್ಕೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಮುರಿದು ಬಿದ್ದಿದೆ. ತಕ್ಷಣ ಸ್ಥಳೀಯರು ಸ್ಥಳೀಯಾಳಿತ ಗಮನಕ್ಕೆ ತಂದಿದ್ದರು. ಇನ್ನಷ್ಟು ಕುಸಿತದ ಭೀತಿಯಲ್ಲಿ ಅಧಿಕಾರಿಗಳು ರಸ್ತೆಗೆ ಬ್ಯಾರಿಕೇಡ್ ಹಾಕಿ ಸಂಚಾರ ನಿಷೇಧಿಸಿದ್ದಾರೆ.
ಇದನ್ನೂ ಓದಿ : ಸಚಿವ ಮಂಕಾಳ ವೈದ್ಯ ಮತ್ತೊಂದು ಪೋಸ್ಟ್; ಬಿಜೆಪಿ ಆರೋಪಕ್ಕೆ ಸ್ಪಷ್ಟನೆ
ಸಂಚಾರಕ್ಕೆ ನಿರ್ಬಂಧ ಹೇರಿ ವಾರವಾದರೂ ಸ್ಥಳೀಯಾಡಳಿತ ಈವರೆಗೂ ಕಾಮಗಾರಿ ಆರಂಭಿಸಿಲ್ಲ. ಇನ್ನಷ್ಟು ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾಮಗಾರಿ ಕೈಗೊಳ್ಳದೆ ಇರುವುದರಿಂದ ಸ್ಥಳೀಯರು ಪರದಾಡುವಂತಾಗಿದೆ. ಶಾಲಾ ಮಕ್ಕಳು, ಗ್ರಾಮಸ್ಥರು ಇದೇ ರಸ್ತೆ ಮುಖಾಂತರ ಮಾವಿನಕುರ್ವೆಗೆ ಬರಬೇಕಾಗಿದ್ದು, ರಸ್ತೆ ಬಂದ್ ಇರುವುದರಿಂದ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ಶಾಲಾ ಮಕ್ಕಳು ಮೊಣಕಾಲಿನವರೆಗೆ ನೀರು ತುಂಬಿರುವ ಪಕ್ಕದ ಗದ್ದೆ ಮೂಲಕ ಹಾದು ಶಾಲೆಗೆ ಸೇರುವಂತಾಗಿದೆ.
ಇದನ್ನೂ ಓದಿ : ಹದಗೆಟ್ಟ ಆಸ್ಪತ್ರೆ ರಸ್ತೆ; ತಪ್ಪದ ಗೋಳು
ಭಟ್ಕಳಕ್ಕೆ ಬರುವವರಿಗೆ ಮಗ್ದುಂ ಕಾಲೋನಿ ಮೂಲಕ ರಸ್ತೆ ಇದೆ. ಆದರೆ ಆ ರಸ್ತೆ ನಿರ್ಜನ ಪ್ರದೇಶದಲ್ಲಿ ಇರುವುದರಿಂದ ಮಹಿಳೆಯರು, ಮಕ್ಕಳು ತಿರುಗಾಡಲು ಹಿಂಜರಿಯುವಂತಾಗಿದೆ. ಅದು ಕೂಡ ಆಟೋ, ಬಸ್ ವ್ಯವಸ್ಥೆ ಈ ರಸ್ತೆಯಲ್ಲಿ ಇಲ್ಲ. ಗಟ್ಟಿ ಧೈರ್ಯ ಇದ್ದವರು ಐದು ಕಿಮೀ ನಡೆದುಕೊಂಡು ಹೋಗಬೇಕು ಎನ್ನುತ್ತಾರೆ ಸ್ಥಳೀಯರು. ಸದ್ಯ ವಾಹನ ವ್ಯವಸ್ಥೆ ಇದ್ದವರು ಮಾತ್ರ ಈ ರಸ್ತೆಯಲ್ಲಿ ಓಡಾಡುವಂತಾಗಿದೆ.
ಇದನ್ನೂ ಓದಿ : ಹದಗೆಟ್ಟ ಆಸ್ಪತ್ರೆ ರಸ್ತೆ; ತಪ್ಪದ ಗೋಳು
ಗುಡ್ಡ ಕುಸಿದಂತಹ ಪ್ರಾಕೃತಿಕ ವಿಕೋಪ ಉಂಟಾದರೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಅದನ್ನು ಬಿಟ್ಟು ಬ್ಯಾರಿಕೇಡ್ ಹಾಕಿ ಜನರನ್ನು ಪರದಾಡುವಂತೆ ಮಾಡುವುದಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಆದಷ್ಟು ಬೇಗ ಸ್ಥಳಕ್ಕೆ ಭೇಟಿ ನೀಡಬೇಕು. ಸ್ಥಳೀಯರಿಗೆ ಆಗಿರುವ ತೊಂದರೆಗೆ ತ್ವರಿತ ಪರಿಹಾರ ಒದಗಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಶರಾವತಿ ನದಿಪಾತ್ರದ ಜನರಿಗೆ ಕೊಂಚ ನಿರಾಳ