ಅಂಕೋಲಾ : ಗುಡ್ಡಕುಸಿತ (landslide in Ankola) ನಾಪತ್ತೆಯಾದವರ ಕುಟುಂಬಗಳಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯಾವುದೇ ಕಾರಣಕ್ಕೂ ರಕ್ಷಣಾ ಕಾರ್ಯಾಚರಣೆ ನಿಲ್ಲಿಸದೆ ಸತತ ಪ್ರಯತ್ನ ಮಾಡುತ್ತೇವೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಅವರು ರವಿವಾರ ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತ (landslide in Ankola) ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಪರಿಶೀಲಿಸಿ ಮಾತನಾಡಿದರು. ಭಾರಿ ಮಳೆಯಿಂದ ನೀರಿನ ರಭಸ ಹೆಚ್ಚಾಗಿರುವುದರಿಂದ ಮಣ್ಣಿನಡಿ ಸಿಲುಕಿರುವ ಲಾರಿ ಹಾಗೂ ನಾಪತ್ತೆಯಾದವರ ಹುಡುಕಾಟಕ್ಕೆ ಅಡ್ಡಿಯಾಗುತ್ತಿದೆ ಎಂದರು.

ಇದನ್ನೂ ಓದಿ :  ಮಳೆಹಾನಿ ಪ್ರದೇಶಗಳಿಗೆ ಸಚಿವ ಭೇಟಿ

ಸತತ ೧೩ ದಿನಗಳಿಂದ ನಿರಂತರವಾಗಿ ನಮ್ಮ ಭಾರತೀಯ ಸೇನೆ, NDRF, SDRF ಹಾಗೂ ಇನ್ನು ಅನೇಕ ರಕ್ಷಣಾ ತಂಡಗಳು ಹಗಲು ರಾತ್ರಿ ಎನ್ನದೆ ನಾಪತ್ತೆಯಾದವರ ಹುಡುಕಾಟಕ್ಕಾಗಿ ಶ್ರಮ ಪಡುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ : ಬಿಜೆಪಿ ಪೋಸ್ಟ್ ನೋಡಿ ಸಚಿವ ಮಂಕಾಳ ವೈದ್ಯ ಗರಂ

ಇದೇ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಸ್ಥಳಕ್ಕೆ ಆಗಮಿಸಿದ ಶ್ರೀ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಗುರುಗಳಾದ ಶ್ರೀ ಪ್ರಣವಾನಂದ ಸ್ವಾಮೀಜಿ ಜೊತೆ ಸಚಿವರು ಸಮಾಲೋಚನೆ ನಡೆಸಿದರು. ಕೇರಳದ ಲಾರಿ ಚಾಲಕ ಅರ್ಜುನ ಹುಡುಕಾಟಕ್ಕೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಕೇರಳದ ಶಾಸಕರ ಜೊತೆ ಹಾಗೂ ರಕ್ಷಣಾ ತಂಡದ ನಾಯಕರ ಜೊತೆ ಕಾರ್ಯಾಚರಣೆ ಬಗ್ಗೆ ಚರ್ಚಿಸಿದರು. ಈಗಾಗಲೇ ನಡೆಯುತ್ತಿರುವ ಕಾರ್ಯಾಚರಣೆ ಬಗ್ಗೆ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಮತ್ತಿತರರು ಜೊತೆಯಲ್ಲಿದ್ದರು.

ಇದನ್ನೂ ಓದಿ : ಸಚಿವ ಮಂಕಾಳ ವೈದ್ಯ ಮತ್ತೊಂದು ಪೋಸ್ಟ್; ಬಿಜೆಪಿ ಆರೋಪಕ್ಕೆ ಸ್ಪಷ್ಟನೆ