ಕಾರ್ಗಲ(ಸಾಗರ) : ಲಿಂಗನಮಕ್ಕಿ (Linganamakki) ಜಲಾಶಯದ ನೀರು ಬಿಟ್ಟಾಗ ಹೊನ್ನಾವರ ಶರಾವತಿ ನದಿಯ ಎಡದಂಡೆ ಮತ್ತು ಬಲದಂಡೆಯ ವಾಸಿಗಳಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸಚಿವ ಮಂಕಾಳ ವೈದ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅವರು ಸೋಮವಾರ ಲಿಂಗನಮಕ್ಕಿ (linganamakki) ಜಲಾಶಯಕ್ಕೆ ಭೇಟಿ ನೀಡಿ ಬಾಗಿನ ಅರ್ಪಿಸಿದರು. ನಂತರ ನೀರಿನ ಒಳಹರಿವು, ನೀರಿನ ಸಂಗ್ರಹವನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಈಗಾಗಲೆ ಹಲವು ದುರಂತಗಳು ಸಂಭವಿಸಿ ಅನೇಕರು ತಮ್ಮ ಪ್ರಾಣ, ನೆಲೆಯನ್ನು ಕಳೆದುಕೊಂಡಿದ್ದಾರೆ. ಈಗ ಜಿಲ್ಲೆಯ ಜಲಾಶಯಗಳು ಭರ್ತಿಯಾಗಿವೆ. ಯಾವುದೇ ಕ್ಷಣದಲ್ಲಿ ನೀರು ಬಿಡುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ತಾಲೂಕಿನ ಎಡದಂಡೆ ಮತ್ತು ಬಲದಂಡೆಯಲ್ಲಿ ವಾಸಿಸುವ ಜನರಿಗೆ ತೊಂದರೆಯಾಗಬಾರದು ಎಂದು ಸಚಿವರು ಸೂಚಿಸಿದರು.
ಇದನ್ನೂ ಓದಿ : ಕಾಡಿನಲ್ಲಿ ಅಟ್ಟಾಡಿಸಿ ಡಕಾಯಿತರ ಬಂಧನ
೫೦ ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟರೆ ಸುಮಾರು ೪೫೦ ಮನೆಗಳು, ೧ ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟರೆ ೨೨೦೦ಕ್ಕೂ ಅಧಿಕ ಮನೆಗಳು ಮುಳುಗಡೆಯಾಗಲಿದೆ. ಜಲಾಶಯದಲ್ಲಿ ನೀರು ತುಂಬುವವರೆಗೂ ಕಾಯುವದು ಬೇಡ. ೮೦ ಪ್ರತಿಶತಕ್ಕೂ ಅಧಿಕ ನೀರು ಸಂಗ್ರಹವಾಗುತ್ತಿರುವಂತೆ ಸ್ವಲ್ಪ ಸ್ವಲ್ಪ ನೀರು ಬಿಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ : ಬ್ರಹ್ಮಾನಂದ ಸರಸ್ವತಿ ಶ್ರೀಗಳ ಆಶೀರ್ವಾದ ಪಡೆದ ಆರ್.ವಿ.ಡಿ.
ಸಮುದ್ರದಲ್ಲಿ ಏರಿಳಿತಗಳು ಇದ್ದುದ್ದರಿಂದ ನೀರಿನ ಇಳಿಕೆ ಇದ್ದ ಸಂದರ್ಭದದಲ್ಲಿ ನೀರು ಬಿಡಬೇಕು. ಸಮುದ್ರದಲ್ಲಿ ಏರಿಕೆ ಇದ್ದಾಗ ಬಿಟ್ಟರೆ ಅಲ್ಲಿ ಗಾಳಿಯ ಒತ್ತಡ ಹೆಚ್ಚಿರುವುದರಿಂದ ಮತ್ತೆ ಸ್ಥಳೀಯ ನಿವಾಸಿಗಳಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಇದನ್ನು ಕಡ್ಡಾಯವಾಗಿ ಗಮನಿಸಿ, ಪಾಲಿಸುವಂತೆ ಸಚಿವರು ಸಲಹೆ ನೀಡಿದರು.
ಇದನ್ನೂ ಓದಿ : ಜುಲೈ ೨೯ರಂದು ವಿವಿಧೆಡೆ ಅಡಿಕೆ ಧಾರಣೆ
ಲಿಂಗನಮಕ್ಕಿ ಜಲಾಶಯದ ವೀಕ್ಷಣೆ ನಂತರ ಹೊನ್ನಾವರ ತಾಲೂಕಿನ ಶರಾವತಿ ನದಿಪಾತ್ರಕ್ಕೆ ಸಂಬಂಧಪಡುವ ೧೩ ಪಂಚಾಯಿತಿಯ ಪಿಡಿಒಗಳ ವಿಡಿಯೋ ಕಾನ್ಪರೆನ್ಸ್ ನಡೆಸಿ ಸಾಧಕಬಾಧಕಗಳ ಚರ್ಚೆ ನಡೆಸಿದರು.
ಇದನ್ನೂ ಓದಿ : ಹಳ್ಳದಲ್ಲಿ ಬಿದ್ದು ಕೃಷಿಕ ಸಾವು
ಸಾಗರ, ಹೊನ್ನಾವರ ತಾಲೂಕಿನ ಹಿರಿಯ ಅಧಿಕಾರಿಗಳು, ಚೀಪ್ ಇಂಜಿನಿಯರ್ ರಮೇಶ ಎಚ್. ಆರ್, ಮೋಹನ ಜಿ.ಸಿ., ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ, ಲಿಂಗನಮಕ್ಕಿ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಕಾಶ ಕೆ., ಗೇರುಸೊಪ್ಪ ಕೆ.ಪಿ.ಸಿ.ಟಿ.ಎಲ್. ಅಭಿಯಂತರ ಗಿರೀಶ ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳು ಇದ್ದರು.