ಹೊನ್ನಾವರ : ಲಿಂಗನಮಕ್ಕಿ ಜಲಾಶಯದಿಂದ ಆ.೧ರಿಂದ ನೀರು ಬಿಡುಗಡೆ ಮಾಡಲು ಯೋಜಿಸಲಾಗಿದೆ. ಹೀಗಾಗಿ ಲಿಂಗನಮಕ್ಕಿ ಜಲಾಶಯ(linganamakki dam)ದಿಂದ ಹರಿದು ಬರುವ ನೀರನ್ನು ಗೇರುಸೊಪ್ಪ ಜಲಾಶಯ(gerusoppa dam)ದಿಂದಲೂ ಬಿಡುಗಡೆ ಮಾಡಲು (water release) ನಿರ್ಧರಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಗೇರುಸೊಪ್ಪ ಜಲಾಶಯವು ನೀರಿನ ಸಂಗ್ರಹವನ್ನು ಗರಿಷ್ಠ ಮಟ್ಟದಲ್ಲಿ ಕಾಪಾಡಿ ವಿದ್ಯುತ್ ಉತ್ಪಾದಿಸುವ ಜಲಾಶಯವಾಗಿದೆ. ಆದರೆ, ಸಂಗ್ರಹಣಾ ಸಾಮರ್ಥ್ಯವು ಕಡಿಮೆಯಿದೆ. ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿಯಾಗಿ ಹೊರಬಿಟ್ಟ ನೀರನ್ನು ಗೇರುಸೊಪ್ಪ ಜಲಾಶಯ(gerusoppa dam)ದಲ್ಲಿ ಸಂಗ್ರಹಿಸಲು ಅವಕಾಶವಿಲ್ಲ. ಆದ್ದರಿಂದ ಅಣೆಕಟ್ಟೆಯ ಸುರಕ್ಷತೆಯ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಗೇರುಸೊಪ್ಪ ಜಲಾಶಯದಿಂದಲೂ ಹೊರಬಿಡಲು (water release) ನಿರ್ಧರಿಸಲಾಗಿದೆ.
ಇದನ್ನೂ ಓದಿ : ಆ.೧ ರಿಂದ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ
ಆ.೧ರಿಂದ ಗೇರುಸೊಪ್ಪ ಜಲಾಶಯದಿಂದ ೫೦ ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡುವ ಸಾಧ್ಯತೆಯಿದೆ. ಈ ಕುರಿತು, ಭಟ್ಕಳ ಸಹಾಯಕ ಆಯುಕ್ತರು ಹೊನ್ನಾವರ ತಹಶೀಲ್ದಾರ ಅವರಿಗೆ ಕರೆ ಮಾಡಿ ಸೂಚನೆ ನೀಡಿದ್ದಾರೆ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಇದನ್ನ ಓದಿ : ಶರಾವತಿ ನದಿ ಪಾತ್ರದ ನಿವಾಸಿ ಬಗ್ಗೆ ಎಚ್ಚರ ವಹಿಸಿ
ಸಹಾಯಕ ಆಯುಕ್ತರ ನಿರ್ದೇಶನದಂತೆ, ಹೊನ್ನಾವರ ತಹಶಿಲ್ದಾರರು ಸಂಬಂಧಪಟ್ಟ ಪ್ರಕೃತಿ ನೋಡಲ್ ಅಧಿಕಾರಿ, ಪಿಡಿಒ, ಕಂದಾಯ ನಿರೀಕ್ಷಕರು ಮತ್ತು ಗ್ರಾಮಾಡಳಿತ ಅಧಿಕಾರಿಗಳಿಗೆ ಅಲರ್ಟ್ ಇರುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಕಾಳಿನದಿ ಪ್ರವಾಹದ ಮೊದಲ ಮುನ್ನೆಚ್ಚರಿಕೆ ಸೂಚನೆ
ಸ್ಥಳೀಯ ಮಟ್ಟದಲ್ಲಿ/ಗ್ರಾಮ ಪಂಚಾಯತ ಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಜನ-ಜಾನುವಾರು, ಅಮೂಲ್ಯ ವಸ್ತುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವ ಬಗ್ಗೆ ವ್ಯಾಪಕವಾಗಿ ಪ್ರಚಾರ/ಡಂಗುರ ಹೊರಡಿಸಲು ಸೂಚಿಸಿದ್ದಾರೆ. ಜುಲೈ ೩೧ರ ಸಾಯಂಕಾಲದೊಳಗೆ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ/ಕಾಳಜಿಕೇಂದ್ರಕ್ಕೆ ಕರೆತರಲು ಕ್ರಮಕೈಗೊಳ್ಳುವಂತೆ ತಹಶೀಲ್ದಾರರು ಸೂಚಿಸಿದ್ದಾರೆ.