ಸಾಗರ : ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಲಿಂಗನಮಕ್ಕಿ ಜಲಾಶಯದ ಒಳ ಹರಿವು (Inflow) ಏರಿಕೆಯಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಇಂದು ಜುಲೈ ೩೧ರಂದು ಲಿಂಗನಮಕ್ಕಿ ಜಲಾಶಯದಲ್ಲಿ ೮೨,೫೮೭ ಕ್ಯೂಸೆಕ್ ಒಳಹರಿವು ಇದೆ. ಕಳೆದ ೨೪ ಗಂಟೆಯಲ್ಲಿ ಡ್ಯಾಂನ ನೀರಿನ ಮಟ್ಟ ೨/೧೫ ಅಡಿಯಷ್ಟು ಏರಿಕೆಯಾಗಿದೆ. ನೀರಿನ ಮಟ್ಟ ೧೮೧೨.೬೫ ಅಡಿಗೆ ತಲುಪಿದೆ. ಪ್ರಸ್ತುತ ಜಲಾಶಯವು ಶೇ.೮೬.೫೧ರಷ್ಟು ಭರ್ತಿಯಾಗಿದೆ.
ಇದನ್ನೂ ಓದಿ : ಗದ್ದುಗೆ ಏರಿದ ಮಾರಿಯಮ್ಮ
ಜಲಾನಯನ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಣೆ ಇರುವುದರಿಂದ ಪ್ರತಿ ದಿನಕ್ಕೆ ಸುಮಾರು ೮೦ ಸಾವಿರದಿಂದ ೯೦ ಸಾವಿರ ಕ್ಯೂಸೆಕ್ಸ್ ಒಳಹರಿವು ನಿರೀಕ್ಷಿಸಲಾಗಿದೆ. ಈಗಾಗಲೇ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುವ ಘೋಷಣೆ ಮಾಡಲಾಗಿದೆ. ಲಿಂಗನಮಕ್ಕಿ ಅಣೆಕಟ್ಟಿನ ರೇಡಿಯಲ್ ಗೇಟ್ಗಳನ್ನು ಕಾರ್ಯಾಚರಣೆ ವಿಧಾನದ ಪ್ರಕಾರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ನಾಳೆ (ಆ.೧) ಬೆಳಿಗ್ಗೆ ೧೦ ಗಂಟೆಯಿಂದ ೧೦ ಸಾವಿರ ಕ್ಯೂಸೆಕ್ಸ್ ನೀರು ಬಿಡಲು ನಿರ್ಧರಿಸಲಾಗಿದೆ.