ಭಟ್ಕಳ: ಇಂದಿನಿಂದ ಗೇರುಸೊಪ್ಪ‌ ಅಣೆಕಟ್ಟಿನಿಂದ‌ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ಶರಾವತಿ ನದಿ ಪಾತ್ರದ ಸುಧೀಂದ್ರ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ವಸತಿ ವ್ಯವಸ್ಥೆಗೆ(provisional arrangement) ಕ್ರಮಕೈಗೊಂಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಶಿವಮೊಗ್ಗದ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಒಳ ಹರಿವು ಹೆಚ್ಚಾಗಿರುವುದರಿಂದ ನೀರನ್ನು ಇಂದಿನಿಂದ ಹೊರ ಬಿಡಲಾಗುತ್ತಿದೆ. ಪರಿಣಾಮ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗೇರುಸೊಪ್ಪಾ ಅಣೆಕಟ್ಟಿನಲ್ಲಿ ನೀರು ಹರಿದುಬರಲಿದೆ. ವಿದ್ಯುತ್ ಉತ್ಪಾದಿಸುವ ಗೇರುಸೊಪ್ಪ ಅಣೆಕಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಗೆ ಅವಕಾಶವಿಲ್ಲ. ಹೀಗಾಗಿ ಸುಮಾರು ೫೦ ಸಾವಿರ ಕ್ಯೂಸೆಕ್ಸ್ ನೀರನ್ನು ಇಂದಿನಿಂದ ಹೊರಬಿಡಲಾಗುತ್ತಿದೆ.

ಇದನ್ನೂ ಓದಿ : ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಳ

ಸೆಮಿಸ್ಟರ್ ಪರೀಕ್ಷೆಗೆ ತೊಂದರೆ : ಹೊನ್ನಾವರ ತಾಲೂಕಿನ ಶರಾವತಿ ನದಿ ಪಾತ್ರದ ವಿದ್ಯಾರ್ಥಿಗಳು ಭಟ್ಕಳ‌ದ ಸುಧೀಂದ್ರ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಪ್ರತಿನಿತ್ಯ ಬರುತ್ತಿದ್ದಾರೆ. ಅಣೆಕಟ್ಟಿನಿಂದ ‌ನೀರು ಹೊರಬಿಟ್ಟಾಗ ಇವರಿಗೆ ಕಾಲೇಜಿಗೆ ಬರಲು ಕಷ್ಟಕರವಾಗಿರಲಿದೆ. ಜೊತೆಗೆ ಕವಿವಿ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗಲಿದೆ.

ಇದನ್ನೂ ಓದಿ :  ಗೇರುಸೊಪ್ಪ ಜಲಾಶಯದಿಂದಲೂ ನೀರು ಬಿಡುಗಡೆ

ವಿದ್ಯಾರ್ಥಿಗಳ ತೊಂದರೆ ಮನಗಂಡ ಸುಧೀಂದ್ರ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಸತಿ ಕಲ್ಲಿಸಲು(provisional arrangement) ಮುಂದಾಗಿದೆ. ಕ.ವಿ.ವಿ ಸೆಮಿಸ್ಟರ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ತಲುಪಿ ಪರೀಕ್ಷೆಗೆ ಹಾಜರಾಗಲು ತೊಂದರೆ ಆಗುವುದನ್ನು ಮನಗಂಡು ಈ ಕ್ರಮನಕೈಗೊಂಡಿದೆ. ಆಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲೇಜಿಗೆ ದೂರವಾಣಿಯ ಮೂಲಕ ಅಥವಾ ಖುದ್ದಾಗಿ ಸಂಪರ್ಕಿಸಿ ತಿಳಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ :  ಆ.೧ ರಿಂದ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ