ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿ ಹಿನ್ನೆಲೆ ಕ್ರೆಸ್ಟ್‌ ಗೇಟ್‌ ಮೂಲಕ ಶರಾವತಿ ನದಿಗೆ ನೀರು ಬಿಡಲಾಗಿದೆ (water released).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಜಲಾಶಯದ ಗರಿಷ್ಠ ಮಟ್ಟ ೧೮೧೯ ಅಡಿಯಲ್ಲಿ ೧೮೧೪ ಅಡಿ ಭರ್ತಿ ಆದ ಹಿನ್ನೆಲೆ ೩ ಕ್ರೆಸ್ಟ್‌ ಗೇಟ್‌ ಮೂಲಕ ನದಿಗೆ ನೀರು ಬಿಡಲಾಗಿದೆ (water released). ೧೦ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ : ಶರಾವತಿ ನದಿಪಾತ್ರದ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಸತಿ

ಇದೇ ವೇಳೆ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಶಾಸಕರಿಗೆ ಲಿಂಗನಮಕ್ಕಿ ಜಲಾಶಯದ ಅಧಿಕಾರಿಗಳು ಸಾಥ್ ನೀಡಿದರು.

ಇದನ್ನೂ ಓದಿ : ಭಟ್ಕಳದ ಸನಿಹ ವಿಮಾನ ನಿಲ್ದಾಣ ಆಗುತ್ತಾ?!

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಕಳೆದ ವರ್ಷ ಬರಗಾಲ ಆವರಿಸಿತ್ತು. ಈ ಬಾರಿ ಸಾಕಷ್ಟು ಮಳೆ ಆಗಿದೆ. ಐದು ವರ್ಷದ ನಂತರ ಶರಾವತಿ ಭರ್ತಿಯಾಗಿದೆ. ಜಲಾಶಯ ಭರ್ತಿ ಆಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲಿದೆ ಎಂದರು.

ಇದನ್ನೂ ಓದಿ : ಮಾರಿಯಮ್ಮನ ಆಶೀರ್ವಾದ ಪಡೆದ ಸಚಿವ ಮಂಕಾಳ ವೈದ್ಯ