ಸಾಗರ : ತಾಲೂಕಿನ ಲಿಂಗನಮಕ್ಕಿ ಜಲಾಶಯದ (reservoir) ಹೊರಹರಿವು ಹೆಚ್ಚಿಸಲಾಗಿದೆ. ಜಲಾಶಯದ ೯ ಗೇಟ್‌ಗಳನ್ನು ತೆರೆದು ಶರಾವತಿ ನದಿಗೆ ನೀರು ಬಿಡಲಾಗುತ್ತಿದೆ. ಗೇಟ್‌ಗಳಿಂದ ಧುಮ್ಮಕ್ಕುವ ಜಲಧಾರೆಗೆ ಜಗಮಗಿಸುವ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ರಾತ್ರಿಯ ಈ ನಯನ ಮನೋಹರ ದೃಶ್ಯ ನೋಡುಗರಿಗೆ ರಸದೌತಣ ಉಣಬಡಿಸುತ್ತಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಲಿಂಗನಮಕ್ಕಿ ಜಲಾಶಯದಿಂದ (reservoir) ನಿನ್ನೆ ರಾತ್ರಿ ಹೆಚ್ಚುವರಿಯಾಗಿ ನೀರು ಬಿಡಲಾಗಿದೆ. ೧೧ ಗೇಟಿನಲ್ಲಿ ೯ ರೇಡೊಯಲ್ ಗೇಟನ್ನ ಎತ್ತರಿಸಿ ಸುಮಾರು ೧೮ ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.

ಇದನ್ನೂ ಓದಿ :‌ ಹೆದ್ದಾರಿ ಪ್ರಾಧಿಕಾರ ಪ್ರಾದೇಶಿಕ ಕಚೇರಿಗೆ ಪ್ರಣವಾನಂದ ಸ್ವಾಮೀಜಿ
ಜಲಾನಯನ ಪ್ರದೇಶದಲ್ಲಿ ನಿರಂತರ ಎಡಬಿಡದೆ ಮಳೆಯಾಗುತ್ತಿದೆ. ಒಳಹರಿವು ಹೆಚ್ಚಾದ ಕಾರಣ, ಹೆಚ್ಚುವರಿಯಾಗಿ ನೀರನ್ನು ನದಿಗೆ ಬಿಡಲಾಗಿದೆ. ಸಂಜೆಯಿಂದ ೫೪ ಸಾವಿರ ಕ್ಯೂಸೆಕ್ ನೀರಿನ‌ ಒಳಹರಿವಿತ್ತು.

ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದ ಮಾರಿ ಜಾತ್ರೆ ಸಂಪನ್ನ

ನಿನ್ನೆ ಗುರುವಾರ ಬೆಳಿಗ್ಗೆ ೧೮೧೪ ಅಡಿ ನೀರಿತ್ತು. ಬೆಳಿಗ್ಗೆ ಮೂರು ಗೇಟಿನಿಂದ ೧೦  ಸಾವಿರ ಕ್ಯೂಸೆಕ್ ನೀರು ಹರಿಸಲಾಗಿತ್ತು. ಸಂಜೆಗೆ ಇದರ ಒಳಹರಿವು ಹೆಚ್ಚಾಗಿ ೯ ಗೇಟನ್ನ ಎತ್ತರಿಸಿ ನೀರು ನದಿಗೆ ಬಿಡಲಾಗಿದೆ. ಸಹಜವಾಗಿ ಗೇರುಸೊಪ್ಪ ಜಲಾಶಯದಲ್ಲಿ ನೀರಿನ ಒತ್ತಡ ಹೆಚ್ಚಲಿದೆ. ಯಾವುದೇ ಸಮಯದಲ್ಲಿ ಗೇರುಸೊಪ್ಪ ಅಣೆಕಟ್ಟಿನಿಂದ ನೀರು ಬಿಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಆಗಸ್ಟ್‌ ೧ರಂದು ವಿವಿಧೆಡೆ ಅಡಿಕೆ ಧಾರಣೆ