ಬೆಂಗಳೂರು : ಆದರ್ಶ ಮಾನವನ ಸಂಕೇತ (ಸಿಂಬಲ್ ಆಪ್ ಐಡಿಯಲ್ ಹ್ಯುಮ್‌ನ ಬಿಯಿಂಗ) ಪ್ರಭು ಶ್ರೀ ರಾಮಚಂದ್ರನ ೭೭ಅಡಿ ಕಂಚಿನ ವಿಗ್ರಹವು (Shriram statue) ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದಲ್ಲಿ ೨೦೨೫ರ ಡಿಸೆಂಬರ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಅವರು ಬೆಂಗಳೂರಿನ ದ್ವಾರಕನಾಥ ಭವನದಲ್ಲಿ ಚಾತುರ್ಮಾಸ್ಯ ವೃತ ಸ್ವೀಕಾರ ಮಾಡಿ ಭಕ್ತರಿಗೆ ಆಶೀರ್ವಚನ ನೀಡಿದರು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠ ಆರಂಭವಾಗಿ ೨೦೨೫ನೇ ಇಸವಿಗೆ ೫೫೦ ಸಂವತ್ಸರ ಸಂಪೂರ್ಣವಾಗಲಿದೆ. ಶ್ರೀ ಮಠಕ್ಕೆ ರಾಮ ದೇವರು ಪ್ರಾಪ್ತವಾಗಿ ೫೫೦ ಸಂವತ್ಸರ ಪೂರ್ತಿಯಾಗಲಿದೆ. ಶ್ರೀ ಮಠದ ಮಹಾದ್ವಾರದಿಂದ ಮಠದ ವರೆಗಿನ ಸ್ಥಳವೂ ಶ್ರೀರಾಮನ ಬಿಲ್ಲಿನ ಬಿಲ್ಲಿನ ರೂಪದಲ್ಲಿ ಕಂಗೋಳಿಸುತ್ತಿದೆ. ಇದನ್ನೆಲ್ಲಾ ಮನಗಂಡು ಗೊಕರ್ಣ ಪರ್ತಗಾಳಿಯ ಮೂಲ ಮಠದಲ್ಲಿ ನೆಲದಿಂದ ೭೭ ಅಡಿ ಉದ್ದ ಪ್ರಭು ರಾಮಚಂದ್ರನ ಕಂಚಿನ ವಿಗ್ರಹ (Shriram statue) ನಿರ್ಮಿಸಲಾಗುವದು. ಬೆಂಗೂಳೂರಿನ ನಿರ್ಮಾತೃ ಕೆಂಪೇಗೌಡರ ವಿಗ್ರಹ ನಿರ್ಮಿಸಿದ, ಅಹ್ಮದಾಬಾದಿನಲ್ಲಿ ಸರ್ದಾರ ವಲ್ಲಭಬಾಯಿ ಪಟೇಲರ ಕಂಚಿನ ವಿಗ್ರಹ ನಿರ್ಮಿಸಿದ ಶಿಲ್ಪಿ ರಾಮ ಸುತಾರ ಅವರ ಪುತ್ರ ಅನಿಲ ಸುತಾರ ವಿಗ್ರಹ ನಿರ್ಮಿಸಲಿದ್ದಾರೆ. ಈಗಾಗಲೆ ಮಾತುಕತೆ ಯಶಸ್ವಿಯಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಸರ್ಕಾರಿ ಹಬ್ಬಕ್ಕಾಗಿ ನೌಕರರಿಂದ ೧ ಸಾ.ರೂ. ದೇಣಿಗೆ

೫೫೦ ದಿವಸ ೫೫೦ಕೋಟಿ ರಾಮನಾಮ ತಾರಕ ಮಹಾಮಂತ್ರ ಜಪ ಅಭಿಯಾನ : ಲೋಕಕಲ್ಯಾಣಾರ್ಥವಾಗಿ ೫೫೦ಕೋಟಿ ಶ್ರೀ ರಾಮನಾಮ ತಾರಕ ಮಹಾ ಮಂತ್ರದ ಅಭಿಯಾನಕ್ಕೆ ಶ್ರೀಗಳು ೧೭ ಎಪ್ರಿಲ್ ೨೦೨೪ರ ರಾಮನವಮಿಯಂದು ಚಾಲನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಮಠದ ಭಕ್ತರು ಇರುವೆಲ್ಲಡೆ ಶ್ರೀಗಳು ಸುಮಾರು ೧೨೦ ಜಪ ಅಭಿಯಾನದ ಕೇಂದ್ರಗಳನ್ನು ತೆರೆದಿದ್ದಾರೆ. ಅಲ್ಲಿ ಪ್ರತಿದಿವಸ ಆ ಸಮಾಜ ಭಾಂದವರು ತೆರಳಿ ಒಂದು ಗಂಟೆ ರಾಮನಾಮ ತಾರಕ ಮಂತ್ರವನ್ನು ಪಠಿಸುತ್ತಿದ್ದಾರೆ. ಈ ಪಠಣೆ ಸತತವಾಗಿ ೫೫೦ ದಿನಗಳು ನಡೆಯಲಿದೆ. ಅಕ್ಟೋಬರ್ ೧೮, ೨೦೨೫ರಂದು ಶ್ರೀರಾಮ ನಾಮತಾರಕ ಮಹಾ ಮಂತ್ರದ ಜಪ ಅಭಿಯಾನ ಸಂಪೂರ್ಣಗೊಳ್ಳಲಿದೆ. ಬಳಿಕ ೧೯ ಅಕ್ಟೋಬರ್ ೨೦೨೫ರಿಂದ ೨೬ ನವೆಂಬರ್ ವರೆಗೆ ೧೨೦ ಜಪ ಕೇಂದ್ರಗಳಲ್ಲಿ ಶ್ರೀರಾಮನ ದಿಗ್ವಿಜಯ ಉತ್ಸವ, ರಾಮನ ರಥಯಾತ್ರೆ ನಡೆಯಲಿದೆ. ೨೭ ನವೆಂಬರದಿಂದ ೭ ಡಿಸೆಂಬರ ೨೦೨೫ ಪರ್ತಗಾಳಿ ಮಠದಲ್ಲಿ ದೊಡ್ಡ ಮಹೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಭು ಶ್ರೀರಾಮಚಂದ್ರ ದೇವರ ಕಂಚಿನ ವಿಗ್ರಹ ಲೋಕಾರ್ಪಣೆಗೊಳ್ಳಲಿದೆ. ಇದು ಭಕ್ತ ಸಮೂಹದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ಇಲ್ಲಿ ದಕ್ಷಿಣದ ಅಯೋಧ್ಯೆಯೇ ನಿರ್ಮಾಣವಾಗಲಿದೆ ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.