ಕುಮಟಾ: ಗಾಳಿ ಮಳೆಯಿಂದ ತಾಲೂಕಿನಲ್ಲಿ ಸಾರ್ವನಿಕರ ಮನೆಗಳಿಗೆ ಹಾನಿಯಾಗುತ್ತಿರುವುದು ಮುಂದುವರಿದಿದೆ. ಧಾರೇಶ್ವರದಲ್ಲಿರುವ ಜನತಾ ವಿದ್ಯಾಲಯ ಹೈಸ್ಕೂಲ್ ಪಕ್ಕ ಸುಮಾರು ೧೦೦ ಮೀಟರ್ ದೂರದಲ್ಲಿ ಇರುವ ಗುಡ್ಡ ಸ್ವಲ್ಪ ಪ್ರಮಾಣದಲ್ಲಿ ಕುಸಿದು ಬಿದ್ದಿದೆ (Landslide).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಕುಮಟಾ ಪುರಸಭೆ ವ್ಯಾಪ್ತಿಯ ಗೋವಿಂದ ಜಟ್ಟು ಗೌಡ ಅವರ ಮನೆಯ ಗೋಡೆ ಬಿರುಕು ಬಿಟ್ಟಿದೆಯಲ್ಲದೆ, ಮುರಿದ ಮೇಲ್ಛಾವಣಿ ಈಗ ಆಧಾರ ಕಂಬದ ಮೇಲೆ ನಿಂತಿದೆ. ಇದರಿಂದ ೫೦ ಸಾವಿರ ರೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಶಶಿಹಿತ್ತಲಲ್ಲಿ ಸುಲೋಚನಾ ಸುರೇಶ ಅಂಬಿಗ ಅವರ ಮನೆ ಕುಸಿದ ಪೂರ್ಣ ಹಾನಿಯಾಗಿದೆ. ಇದರಿಂದ ಸುಮಾರು ೧ ಲಕ್ಷ ೫೦ ಸಾವಿರ ರೂ ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : ಕಾಲಪ್ರಜ್ಞೆಯ ಅರಿವು ಅಗತ್ಯ: ರಾಘವೇಶ್ವರ ಸ್ವಾಮೀಜಿ

ಸಂತೆಗುಳಿ ಗ್ರಾಮದಲ್ಲಿ ಪರ್ವಿನ್‌ ಬಾನು ಅಜೀಪ್ ಹೆಗಡೆಕಟ್ಟಾ ಎಂಬವರ ಮನೆಗೆ ತೀವ್ರ ಹಾನಿಯಾಗಿದೆ. ಸುಮಾರು ೧ ಲಕ್ಷ ೭೫ ಸಾವಿರದ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ದಿವಳ್ಳಿಯ ಕಲ್ಲಾರಮಕ್ಕಿ ಎಂಬಲ್ಲಿ ಮಳೆಯ ಹೊಡೆತಕ್ಕೆ ಗುಡ್ಡ ಕುಸಿತವಾಗಿದೆ (Landslide). ಇದರ ಸನಿಹವೇ ೨ ಕುಟುಂಬಕ್ಕೆ ಸೇರಿದ ೧೦ ಜನ ವಾಸಿಸುತ್ತಿರುವ ಮನೆ ಇದೆ. ಈ ಮನೆ ಪಕ್ಕದಲ್ಲಏ ಅಘನಾಶಿನಿ ನದಿ ಇದ್ದು, ಮುಂದಿನ ಅಪಾಯವನ್ನು ಗಮನಿಸಿದ ಸ್ಥಳೀಯ ಆಡಳಿತದ ಅಧಿಕಾರಿಗಳು ಈ ಮನೆಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ :  ೭೭ ಅಡಿ ಶ್ರೀರಾಮಚಂದ್ರನ ಕಂಚಿನ ವಿಗ್ರಹ ಲೋಕಾರ್ಪಣೆ

ಕೂಜಳ್ಳಿ ಗ್ರಾ.ಪಂನ ಬಂಚಖಂಡ ಗ್ರಾಮದಲ್ಲಿ ಶಂಕರ ರಾಮಚಂದ್ರ ಭಟ್ಟ ಎಂಬರ ಮಣ್ಣಿನ ಮನೆಯ ಗೋಡೆ ಕುಸಿದು ಬಿದ್ದಿದೆ. ಕಡೆಕೋಡಿ ಗ್ರಾಮದಲ್ಲಿ ಶ್ರೀಪಾದ ನಾಗಾ ಭಟ್ಟ ಎಂಬವರಿಗೆ ಸೇರಿದ ತೋಟದಲ್ಲಿ ಮಾವಿನಮರ ಬಿದ್ದು ತೆಂಗು ಹಾಗೂ ಅಡಿಕೆ ಮರಗಳಿಗೆ ಹಾನಿಯಾಗಿದೆ. ಅಘನಾಶಿನಿಯಲ್ಲಿ ರಘುವೀರ ಶೆಟ್ಟಿ ಎಂಬವರ ವಾಸ್ತವ್ಯದ ಮನೆಯ ಗೋಡೆ ಭಾಗಶಃ ಹಾನಿಯಾಗಿದೆ. ಗೋಕರ್ಣದ ಬಂಗ್ಲೆಗುಡ್ಡದಲ್ಲಿ ಶಾಂತಿ ರಾಮಾ ಗೌಡ ಎಂಬದ ಮನೆ ಭಾಗಶಃ ಕುಸಿದುಬಿದ್ದು ೧ ಲಕ್ಷ ೨೦ ಸಾವಿರ ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ.