ಕಾರವಾರ : ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಗೃಹ ಬಳಕೆಗಾಗಿ ಪ್ರತೀ ಕುಟುಂಬಕ್ಕೆ ೨೦೦ ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಗೃಹಜ್ಯೋತಿ (gruhajyothi) ಯೋಜನೆಗೆ ಒಂದು ವರ್ಷ ಪೂರ್ಣಗೊಂಡಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಗೃಹಜ್ಯೋತಿ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಸ್ಕಾಂ ವತಿಯಿಂದ ಅರ್ಹ ಎಲ್ಲಾ ಕುಟುಂಬಗಳನ್ನು ಈ ಯೋಜನೆಯಡಿ ನೋಂದಣಿ ಮಾಡಲಾಗಿದೆ. ಇವರೆಲ್ಲರಿಗೂ ಉಚಿತ ವಿದ್ಯುತ್ ಸರಬರಾಜು ಮಾಡುವ ಮೂಲಕ ಯೋಜನೆಯಲ್ಲಿ ಶೇ. ೧೦೦ ರಷ್ಟು ಗುರಿ ಸಾಧಿಸಲಾಗಿದೆ. ಜುಲೈ ಅಂತ್ಯದ ವೇಳೆಗೆ ೨೦೦ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ.
ಇದನ್ನೂ ಓದಿ : ಆಗಸ್ಟ್ ೬ರಂದು ವಿವಿಧೆಡೆ ಅಡಿಕೆ ಧಾರಣೆ
ಉತ್ತರಕನ್ನಡ ಜಿಲ್ಲೆಯಲ್ಲಿ ೨೦೦ ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಅರ್ಹರಿರುವ ೩೮೬೪೨೬ ಕುಟುಂಬಗಳನ್ನು ಗೃಹಜ್ಯೋತಿ (gruhajyothi) ಯೋಜನೆಯಡಿ ನೋಂದಣಿ ಮಾಡಿ ಅವರಿಗೆ ಶೂನ್ಯ ದರದ ವಿದ್ಯುತ್ ಬಿಲ್ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ (ಎಲ್.ಟಿ.೧) ಮತ್ತು ಗೃಹಬಳಕೆಯ (ಎಲ್.ಟಿ.೧) ಸೇರಿದಂತೆ ಒಟ್ಟು ಇರುವ ಸ್ಥಾವರ (ಮೀಟರ್) ಗಳ ಸಂಖ್ಯೆ ೪೨೮೨೦೦. ಇದರಲ್ಲಿ ಯೋಜನೆಗೆ ಅರ್ಹವಾಗಿಲ್ಲದ ಸ್ಥಾವರಗಳ ಸಂಖ್ಯೆ ೩೧೬೬೮ ಮತ್ತು ವಿವಿಧ ಕಾರಣಗಳಿಂದ ನೋಂದಣಿ ತಿರಸ್ಕರಿಸಿದ ಮತ್ತು ನೋಂದಣಿಗೆ ಆಸಕ್ತಿ ತೋರದ ಗ್ರಾಹಕರ ಸಂಖ್ಯೆ ೧೦೧೦೬. ಬಾಕಿ ಉಳಿದ ಎಲ್ಲಾ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯಡಿ ಗರಿಷ್ಠ ೨೦೦ ಯೂನಿಟ್ ವರೆಗೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಕೆಲಸ ಪುನಾರಂಭಕ್ಕೆ ಒಪ್ಪಿಗೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗದ ಶಿರಸಿ ಪಟ್ಟಣ, ಶಿರಸಿ ಗ್ರಾಮಾಂತರ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು ವ್ಯಾಪ್ತಿಯಲ್ಲಿ ೧.೨೫೦೧೩, ದಾಂಡೇಲಿ ವಿಭಾಗದ ದಾಂಡೇಲಿ ಮತ್ತು ಹಳಿಯಾಳ ವ್ಯಾಪ್ತಿಯಲ್ಲಿ ೫೮೮೨೬, ಕಾರವಾರ ವ್ಯಾಪ್ತಿಯ ಕಾರವಾರ, ಅಂಕೋಲಾ, ಸದಾಶಿವಗಡದಲ್ಲಿ ೮೦೯೯೯, ಹೊನ್ನಾವರ ವಿಭಾಗದ ಹೊನ್ನಾವರ, ಕುಮಟಾ, ಭಟ್ಕಳದಲ್ಲಿ ೧೨೧೫೮೮ ಅರ್ಹ ಕುಟುಂಬಗಳನ್ನು ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಲಾಗಿದೆ.
ಇದನ್ನೂ ಓದಿ : ನವದೆಹಲಿಯಲ್ಲಿ ಸಂಸದರ ಭೇಟಿ ಮಾಡಿದ ಪ್ರಣವಾನಂದ ಸ್ವಾಮೀಜಿ
ಅನರ್ಹ ಸ್ಥಾವರಗಳು:
ಜಿಲ್ಲೆಯಲ್ಲಿನ ಒಟ್ಟು ೪೨೮೨೦೦ ಸ್ಥಾವರಗಳಲ್ಲಿ ೨೦೦ ಕ್ಕಿಂತ ಹೆಚ್ಚಿನ ಬಳಕೆ ಮೀರಿದ ಗ್ರಾಹಕರ ಸ್ಥಾವರಗಳು ೧೫೬೯೦, ದೇವಸ್ಥಾನ, ಮಸೀದಿ, ಚರ್ಚ್ ಇತ್ಯಾದಿ ಸ್ಥಾವರಗಳು ೨೯೧೧, ಶಾಲೆ, ಕಾಲೇಜು ಹಾಗೂ ಇತ್ಯಾದಿ ಸರ್ಕಾರಿ ಸ್ಥಾವರಗಳು ೪೫೮೫, ನೋಂದಣಿ ಮಾಡಲು ತಿರಸ್ಕರಿಸಿದ ಗ್ರಾಹಕರ ಸಂಖ್ಯೆ ೧೫೯, ಮನೆ ಖಾಲಿ/ ಎರಡಕ್ಕಿಂತ ಹೆಚ್ಚು ಮನೆ ಸ್ಥಾವರಗಳು ೮೪೮೨ ಇವೆ. ನೋಂದಣಿಗೆ ಆಸಕ್ತಿ ತೋರದ ಗ್ರಾಹಕರ ಸಂಖ್ಯೆ ೯೯೪೭ ಇವೆ. ಒಟ್ಟೂ ೪೧೭೭೪ ಸ್ಥಾವರಗಳು ನೋಂದಣಿಗೆ ಅರ್ಹವಾಗಿರುವುದಿಲ್ಲ.
ಇದನ್ನೂ ಓದಿ : ಬೆಂಗಳೂರಿಗೆ ಹೊರಟಿದ್ದ ಬಸ್ಸಿಗೆ ಬೆಂಕಿ
ಗೃಹಜ್ಯೋತಿ ಯೋಜನೆ ಜಾರಿಯಾದಾಗಿನಿಂದ ಜೂನ್ ೨೦೨೪ ರ ವರೆಗೆ ಜಿಲ್ಲೆಯಲ್ಲಿ ಹೆಸ್ಕಾಂನಿಂದ ೧೮೫.೬೧ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಉಚಿತ ವಿದ್ಯುತ್ ವಿತರಿಸಲಾಗಿದೆ. ಶಿರಸಿ ವಿಭಾಗದಲ್ಲಿ ೫೨.೧೨ ಕೋಟಿ ರೂ, ದಾಂಡೇಲಿ ವಿಭಾಗದಲ್ಲಿ ೨೧.೬೮ ಕೋಟಿ ರೂ, ಕಾರವಾರ ವಿಭಾಗದಲ್ಲಿ ೪೩.೧೧ ಕೋಟಿ ರೂ ಹಾಗೂ ಹೊನ್ನಾವರ ವಿಭಾಗದಲ್ಲಿ ೬೮.೭೦ ಕೋಟಿ ರೂ, ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ.
ಇದನ್ನೂ ಓದಿ : ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ತೃತೀಯ
ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯನ್ನು ಶೇ. ೧೦೦ ರಷ್ಟು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೆಸ್ಕಾಂ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಲಾಖೆಯ ಸಿಬ್ಬಂದಿ ಜಿಲ್ಲೆಯ ಪ್ರತಿ ಮನೆಗಳಿಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದರು. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಗ್ರಾಹಕರ ನೋಂದಣಿಗೆ ಕ್ರಮ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ : ಭೂ ಕುಸಿತ ಅಪಾಯ ತಪ್ಪಿಸಲು ಸ್ಪಾಟರ್ಸ್ ನೇಮಕ
ಜೂನ್ ೨೦೨೪ ರ ವರೆಗೆ ೧೮೧.೬೫ ಕೋಟಿ ರೂ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ. ಪ್ರಸ್ತುತ ಜುಲೈ ೨೦೧೪ ರ ಮಾಹೆಯ ವಿದ್ಯುತ್ ಬಳಕೆಯ ಬಿಲ್ಗಳು ಜನರೇಟ್ ಆಗುತ್ತಿವೆ. ಜುಲೈ ಮಾಹೆಯ ಉಚಿತ ವಿದ್ಯುತ್ ಬಳಕೆಯ ಮೊತ್ತ ಸೇರಿದಲ್ಲಿ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಒಟ್ಟು ೨೦೦ ಕೋಟಿ ರೂ ಅಧಿಕ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ. ಯೋಜನೆಯಡಿ ಶೇ. ೧೦೦ ರಷ್ಟು ಪ್ರಗತಿ ಸಾಧಿಸಲಾಗಿದೆ.
~ದೀಪಕ್ ಕಾಮತ್, ಅಧೀಕ್ಷಕ ಇಂಜಿನಿಯರ್ (ವಿದ್ಯುತ್), ಹೆಸ್ಕಾಂ, ಶಿರಸಿ ವೃತ್ತ.