ಭಟ್ಕಳ : ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟ ಸುದ್ದಿ ಕೇಳಿ ಇಲ್ಲಿನ‌ ಭಟ್ಕಳ ಪುರಸಭೆ (Bhatkal TMC) ಸದಸ್ಯರು ಸಂತಸಗೊಂಡಿದ್ದರು. ಆದರೆ ಆ ಖುಷಿ ಹೆಚ್ಚು ಸಮಯ ಇರಲಿಲ್ಲ. ಮೀಸಲಾತಿ ನೋಡಿ ಪುರಸಭೆ ಸದಸ್ಯರು ನಿರಾಶರಾಗಿದ್ದಾರೆ. ಅಧಿಕಾರಿಗಳ ಆಡಳಿ ಮುಂದುವರಿಯುವುದು ಗ್ಯಾರಂಟಿಯಾಗಿದೆ.

ವಿಡಿಯೋ ಸುದ್ದಿ ಮತ್ತು‌ ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಹೌದು, ಮೀಸಲಾತಿ ಪ್ರಕಟವಾಗಿದ್ದರೂ ಭಟ್ಕಳ ಪುರಸಭೆ (Bhatkal TMC)ಯಲ್ಲಿ ಮತ್ತೆ ಅತಂತ್ರ ಸ್ಥಿತಿ ಮುಂದುವರಿಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿ ಘೋಷಣೆಯಾಗಿದೆ. ಆದರೆ, ಆ ಸ್ಥಾನಕ್ಕೆ ಸದಸ್ಯರೇ ಇಲ್ಲ. ಹೀಗಾಗಿ, ಪುರಸಭೆ ಮುಖ್ಯಾಧಿಕಾರಿ ತಹಸೀಲ್ದಾರರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ : ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಘೋಷಣೆ

ಭಟ್ಕಳ ಪುರಸಭೆ(Bhatkal TMC)ಗೆ ಅಧ್ಯಕ್ಷ ಹುದ್ದೆಗೆ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ ಎ ಮೀಸಲಾತಿ ಬಂದಿದೆ. ಆದರೆ ಅಧ್ಯಕ್ಷೆ ಹುದ್ದೆ ಪ್ರತಿನಿಧಿಸುವ ಪರಿಶಿಷ್ಟ ಜಾತಿ ಮಹಿಳೆ ಇಲ್ಲಿ ಇಲ್ಲದಿರುವದು ಮತ್ತೆ ಭಟ್ಕಳ ಪುರಸಭೆಗೆ ಗ್ರಹಣ ಹಿಡಿದಂತಾಗಿದೆ. ಪರಿಶಿಷ್ಟ ಜಾತಿ ಮಹಿಳೆ ಪ್ರತಿನಿಧಿಸುವ ಸದಸ್ಯರು ಇಲ್ಲದಿರುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿ, ತಹಸೀಲ್ದಾರ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಉಲ್ಲೇಖಿಸಿ ತಹಸೀಲ್ದಾರರು ಭಟ್ಕಳ ಉಪವಿಭಾಗಾಧಿಕಾರಿಗೆ ಪತ್ರ ಬರೆಯಬೇಕು. ಅಲ್ಲಿಂದ ಜಿಲ್ಲಾಧಿಕಾರಿ, ಬಳಿಕ ಜಿಲ್ಲಾಧಿಕಾರಿ ಅದನ್ನು ಸರ್ಕಾರಕ್ಕೆ ಕಳುಹಿಸಬೇಕು. ಇದೆಲ್ಲಾ ಪ್ರಕ್ರಿಯೆ ಮುಗಿಯುವವರೆಗೆ ಸದಸ್ಯರ ಅವಧಿಯೇ ಮುಕ್ತಾಯವಾಗಲಿದೆ ಎನ್ನುವದು ಸದಸ್ಯರ ಅಳಲು.

ಇದನ್ನೂ ಓದಿ : ಕಾಲನ ಕಣ್ಣಿನಿಂದ ಜೀವನ ಅರಿಯಬಹುದು: ರಾಘವೇಶ್ವರ ಶ್ರೀ

ಭಟ್ಕಳ ಪುರಸಭೆಯಲ್ಲಿ ಒಟ್ಟು ೨೩ ಸದಸ್ಯರಿದ್ದಾರೆ. ಅವರಲ್ಲಿ ತಂಜೀಂ ಬೆಂಬಲಿತ ೧೭ ಸದಸ್ಯರು ಅವಿರೋಧ ಆಯ್ಕೆಯಾದವರು. ಇನ್ನುಳಿದಂತೆ ಕಾಂಗ್ರೆಸ್ಸಿನಿಂದ ನಾಲ್ವರು ಮತ್ತು ಬಿಜೆಪಿಯಿಂದ ಇಬ್ಬರು ಸದಸ್ಯರು ಇದ್ದಾರೆ‌.

ಇದನ್ನೂ ಓದಿ :  ನಿವೃತ್ತ ಯೋಧಗೆ ತವರಿನಲ್ಲಿ ಅದ್ದೂರಿ ಸ್ವಾಗತ

ಭಟ್ಕಳ ಪುರಸಭೆಯ ಮೊದಲ ಎರಡೂವರೆ ವರ್ಷ ಅವಧಿಗೆ ಪರ್ವೇಜ್ ಖಾಸೀಂಜಿ ಅಧ್ಯಕ್ಷರಾಗಿದ್ದರೆ, ಮಹ್ಮದ್ ಖೈಸರ್ ಉಪಾಧ್ಯಕ್ಷರಾಗಿದ್ದರು. ಇವರ ಅಧಿಕಾರಾವಧಿ ೨೦೧೩ರ ಮೇ ತಿಂಗಳಲ್ಲಿ ಮುಗಿದಿದೆ. ಆ ನಂತರ ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೆ ಈಗಾಗಲೇ ೧೫ ತಿಂಗಳು ಕಳೆದಿದೆ. ಸದಸ್ಯರಿದ್ದರೂ ಅಧಿಕಾರಿಗಳ ಆಡಳಿತವೇ ಇಲ್ಲಿ ನಡೆಯುತ್ತಿದೆ. ಮುಂದೆಯೂ ಅಧಿಕಾರಿಗಳ ಆಡಳಿತವೇ ಮುಂದುವರಿಯಲಿದೆ.

ಇದನ್ನೂ ಓದಿ : ಉ.ಕ. ಜಿಲ್ಲೆಯಲ್ಲಿ 200 ಕೋಟಿ ರೂ.ಗೂ ಅಧಿಕ ಉಚಿತ ವಿದ್ಯುತ್

ಉಸ್ತುವಾರಿ ಮಂತ್ರಿಯೂ ಆಗಿರುವ ಭಟ್ಕಳ ಶಾಸಕ ಮಂಕಾಳ‌ ವೈದ್ಯ ಸರ್ಕಾರದ ಗಮನಕ್ಕೆ ತಂದು ಹೊಸ ಮೀಸಲಾತಿ ಘೋಷಣೆಗೆ ಮುಂದಾಗಬೇಕು ಎನ್ನುವುದು ಇಲ್ಲಿನ ನಾಗರಿಕರ ಆಗ್ರಹ. ಜನಪ್ರತಿನಿಧಿಗಳ ಆಡಳಿತ ಇಲ್ಲದೆ ಭಟ್ಕಳ ಪಟ್ಟಣದ ಅಭಿವೃದ್ಧಿಗೆ ಇನ್ನಷ್ಟು ಹಿನ್ನಡೆ ಆಗಲಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನವದೆಹಲಿಯಲ್ಲಿ ಸಂಸದರ ಭೇಟಿ ಮಾಡಿದ ಪ್ರಣವಾನಂದ ಸ್ವಾಮೀಜಿ