ಭಟ್ಕಳ: ಇಲ್ಲಿನ ಜಾಲಿ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಗಾದಿಗೆ ಸಾಮಾನ್ಯ ವರ್ಗದ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮೀಸಲಾತಿ ಪ್ರಕಟವಾಗಿದೆ. ಇದರ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ(Competition) ಆರಂಭವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಜಾಲಿ ಪಟ್ಟಣ ಪಂಚಾಯಿತಿ ಸದಸ್ಯರ ಚುನಾವಣೆ ನಡೆದು ಈಗಾಗಲೇ ೨ ವರ್ಷ ೭ ತಿಂಗಳು ಕಳೆದಿದೆ. ೨೦೨೧ರ ಡಿಸೆಂಬರ್‌ ೨೭ರಂದು ಚುನಾವಣೆ ನಡೆದಿತ್ತು.  ಏಳು ಜನರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ೧೩ ಸ್ಥಾನಗಳಿಗಾಗಿ ಮತದಾನ ನಡೆದಿತ್ತು.  ಮೊದಲ ಅವಧಿಯಲ್ಲಿ ಸಮೀಮ್ ಬಾನು ಅಧ್ಯಕ್ಷೆ, ಫರಾನ್ ಇರ್ಷಾದ ಇಕ್ಕೇರಿ ಉಪಾಧ್ಯಕ್ಷರಾಗಿದ್ದರು.

ಇದನ್ನೂ ಓದಿ : ಮೀಸಲಾತಿ ಬಂದರೂ ಭಟ್ಕಳ ಪುರಸಭೆ ಅತಂತ್ರ

ಒಟ್ಟು ೨೦ ಸದಸ್ಯರಿರುವ ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ೧೩ ತಂಜೀಂ ಬೆಂಬಲಿತರು, ಕಾಂಗ್ರೆಸಿನಿಂದ ಐವರು, ಬಿಜೆಪಿಯಿಂದ ಇಬ್ಬರು ಸದಸ್ಯರಿದ್ದಾರೆ. ಈ ಬಾರಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಆಕಾಂಕ್ಷಿ ತಂಜೀಮ್ ಬೆಂಬಲಿತ ಸಮೀಮ್ ಬಾನು ಈಗಾಗಲೇ ಅಧ್ಯಕ್ಷರಾಗಿದ್ದಾರೆ.  ಹೀಗಾಗಿ ತನಿಮ್ ಬಾನು ಮತ್ತು ಕಾಂಗ್ರೆಸ್ ಪಕ್ಷದಿಂದ ಸಾಹೀನಾ ಶೇಖ್ ತೀವ್ರ ಪೈಪೋಟಿಯಲ್ಲಿ (Competition) ಇದ್ದಾರೆ. ಉಪಾಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಪಕ್ಷದ ರಮೇಶ ನಾಯ್ಕ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ : ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಘೋಷಣೆ

ಜಾಲಿ ಪಟ್ಟಣ ಪಂಚಾಯಿತಿಯಲ್ಲೂ ತಂಜೀಮ್ ಪ್ರಭಾವ ಹೆಚ್ಚಿರುವದರಿಂದ ತಂಜೀಂ ಅಂತಿಮಗೊಳಿಸಿದವರೇ ಅಧ್ಯಕ್ಷ ಉಪಾಧ್ಯಕ್ಷರಾಗುವ ಅವಕಾಶ ಹೆಚ್ಚಿದೆ. ೨ ವರ್ಷ ೭ ತಿಂಗಳುಗಳಿಂದ ಜನಪ್ರತಿನಿಧಿಗಳ ಆಡಳಿತ ಇಲ್ಲದೆ ನಲುಗುತ್ತಿರುವ ಜಾಲಿ ಪಟ್ಟಣ ಪಂಚಾಯಿತಿಗೆ ಮೀಸಲಾತಿ ಪ್ರಕಟವಾಗುತ್ತಿರುವಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಲು ಆರಂಭವಾಗಿದೆ.

ಇದನ್ನೂ ಓದಿ : ನಿವೃತ್ತ ಯೋಧಗೆ ತವರಿನಲ್ಲಿ ಅದ್ದೂರಿ ಸ್ವಾಗತ