ಭಟ್ಕಳ : ಇಲ್ಲಿನ ಕರಿಕಲ್ ಧ್ಯಾನ ಮಂದಿರದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯ ೧೭ನೇ ದಿನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಿಗಂದೂರು ಮೇಳದವರಿಂದ ಪೌರಾಣಿಕ “ಅಭಿಮನ್ಯು ಕಾಳಗ” ಯಕ್ಷಗಾನ (yakshagana) ಭಕ್ತಾದಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಚಾತುರ್ಮಾಸ್ಯ ವ್ರತದಲ್ಲಿರುವ ಧರ್ಮಸ್ಥಳ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೇರಿದಂತೆ ಸಾವಿರಾರು ಭಕ್ತರು ಯಕ್ಷಗಾನ (yakshagana) ವೀಕ್ಷಿಸಿದರು. ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಡೆಸಿಕೊಟ್ಟ ಸಿಂಗಂದೂರು ಮೇಳದ ಮಾಲೀಕ ರವಿಕುಮಾರ ಅವರನ್ನು ಸ್ವಾಮೀಜಿ ವೇದಿಕೆಯಲ್ಲಿ ಗೌರವಿಸಿದರು. ಈ ಸಂದರ್ಭದಲ್ಲಿ ಭಟ್ಕಳ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ, ಸಂಚಾಲಕ ಪ್ರಥ್ವಿ ಕೃಷ್ಣ ಮತ್ತಿತರರು ಇದ್ದರು.

ಇದನ್ನೂ ಓದಿ : ಕಾರು ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲಿಯೇ ಸಾವು

ಶ್ರೀಗಳ ದರ್ಶನಾಶೀರ್ವಾದ ಪಡೆದ ಭಟ್ಕಳದ ಮಹಾಲೆ ಸಮಾಜ ಬಾಂಧವರು

ಬುಧವಾರ ಬೆಳಿಗ್ಗೆ ಹೆಬಳೆ, ತೆಂಗಿನಗುಂಡಿ, ಕುಕನೀರ್ ಗ್ರಾಮವನ್ನೊಳಗೊಂಡ ಹೆಬಳೆ ನಾಮಧಾರಿ ಕೂಟ, ಕೊಂಕಣ ಖಾರ್ವಿ ಸಮಾಜ ಹಾಗೂ ಮಹಾಲೆ ಸಮಾಜ ಬಾಂಧವರು ಮಠಕ್ಕೆ ಆಗಮಿಸಿ ಸ್ವಾಮೀಜಿಗಳ ಪಾದಪೂಜೆ ಕಾಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಪೂರ್ವದಲ್ಲಿ ತೆಂಗಿನಗುಂಡಿ ಹಾಗೂ ಕುಕನೀರ ಕೂಟದ ಭಕ್ತರು ನೂರಾರು ಸಂಖ್ಯೆಯಲ್ಲಿ ಹೊರಕಾಣಿಕೆ ಹೊತ್ತು ತಂದು ಮಠಕ್ಕೆ ಆರ್ಪಿಸಿದರು. ಮಹಾಪೂಜೆಯ ನಂತರ ಅನ್ನಸಂತರ್ಪಣೆ ಕಾಯಕ್ರಮ ನಡೆಯಿತು.

ವಿಡಿಯೋ ಸಹಿತ ಇದನ್ನೂ ಓದಿ : ಸರ್ಕಾರಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಮನವಿ