ಮಂಗಳೂರು: ಬ್ರೆಜಿಲ್ ದೇಶದ ತಾಟಿಯಾನೆ ಮತ್ತು ಮಂಗಳೂರಿನ ಆದಿತ್ಯ ಅವರ ವಿವಾಹ (marriage) ಮಂಗಳೂರು ರಮಣ ಪೈ ಸಭಾಂಗಣದಲ್ಲಿ ಜಿ ಎಸ್ ಬಿ ಸಂಪ್ರದಾಯದ ಪ್ರಕಾರ ನೆರವೇರಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕರಂಗಲ್ಪಾಡಿ ನಿವಾಸಿ ಆದಿತ್ಯ ಎಂಟು ವರ್ಷಗಳ ಹಿಂದೆ ಉದ್ಯೋಗಕ್ಕೆ ಬ್ರೆಜಿಲ್ ಗೆ ಹೋಗಿದ್ದರು. ೨೦೧೯ರಲ್ಲಿ ತಾಟಿಯಾನೆ ಎಂಬ ಯುವತಿಯ ಪರಿಚಯವಾಗಿ ಇದೀಗ ಇಬ್ಬರು ವಿವಾಹ (marriage) ವಾಗುವರೆಗೂ ಸ್ನೇಹ ಮುಂದುವರಿದಿತ್ತು. ಮನೆಯವರ ಆಶೀರ್ವಾದದ ಪ್ರಕಾರ ಇಬ್ಬರೂ ಇದೀಗ ಸಪ್ತಪದಿ ತುಳಿದಿದ್ದಾರೆ. ವಧು-ವರರ ಕುಟುಂಬಸ್ಥರು ಭಾರತೀಯ ಸಂಪ್ರದಾಯದಂತೆ ಅಗ್ನಿಸಾಕ್ಷಿಯಾಗಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ : ಧರ್ಮನಿಷ್ಠೆಯಿಂದ ಯಮನನ್ನೂ ಗೆಲ್ಲಬಹುದು: ರಾಘವೇಶ್ವರಶ್ರೀ