ಭಟ್ಕಳ : ಕಾರು ಡಿಕ್ಕಿಯಾಗಿ (accident) ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿರುವ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ತೆರ್ನಮಕ್ಕಿಯ ಜಯಾ ವಿಷ್ಣು ನಾಯ್ಕ ನಿನ್ನೆ ಶನಿವಾರ (ಆ.೧೦) ದೂರು ದಾಖಲಿಸಿದ್ದಾರೆ. ಜುಲೈ ೩೧ರಂದು ಅಪಘಾತ ನಡೆದಿದ್ದು, ೧೦ ದಿನಗಳ ನಂತರ ದೂರು ದಾಖಲಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಜಯಾ ನಾಯ್ಕ ಅವರ ಗಂಡ ವಿಷ್ಣು ಹೊನ್ನಯ್ಯ ನಾಯ್ಕ ಅಪಘಾತಕ್ಕೀಡಾಗಿ ಗಾಯಗೊಂಡವರು. ವಿಷ್ಣು ನಾಯ್ಕ ಇವರು ಬಸ್ತಿಯಿಂದ ಮನೆಯ ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿರುವಾಗ ಕಾರು ಡಿಕ್ಕಿ ಹೊಡೆದಿದೆ. ಕೆಳಗಿನಮನೆ ರಸ್ತೆ-ಬೀಚ ರಸ್ತೆಯ ಕ್ರಾಸ್ ಸಮೀಪ ಮುರ್ಡೇಶ್ವರ ಬೀಚ್ ರಸ್ತೆಯಿಂದ ಕೆಳಗಿನಮನೆ ಮುಖ್ಯ ರಸ್ತೆ ಕಡೆಗೆ ಬಂದ ಇಕೋ ಕಾರು (ಕೆಎ-೪೭/ಎ-೪೬೩೭) ಬೈಕಿಗೆ ಡಿಕ್ಕಿ ಹೊಡೆದಿದೆ(accident). ಕಾರು ಚಾಲಕ ಅತ್ಯಂತ ವೇಗ ಮತ್ತು ನಿರ್ಲಕ್ಷತನದಿಂದ ಯಾವುದೇ ಸಿಗ್ನಲ್ ನೀಡದೆ ಒಮ್ಮೆಲೆ ಕಾರನ್ನು ಕೆಳಗಿನಮನೆ ಮುಖ್ಯ ರಸ್ತೆಗೆ ಚಲಾಯಿಸಿರುವುದಾಗಿ ದೂರಲಾಗಿದೆ.

ಇದನ್ನೂ ಓದಿ : ದಶ ಲಕ್ಷ ಗಿಡ ನೆಡುವ ಅಭಿಯಾನಕ್ಕೆ ಚಾಲನೆ

ಗಾಯಗೊಂಡ ವಿಷ್ಣು‌ ನಾಯ್ಕ ಅವರನ್ನು ಚಿಕಿತ್ಸೆಗಾಗಿ ಅದೇ ಕಾರಿನಲ್ಲಿ ಆರ್.ಎನ್.ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಬಲ ಕಾಲಿನ ಮೂಳೆ ಮುರಿತವಾದ ಗಾಯವಾಗಿದ್ದು, ನಂತರ ವೈದ್ಯರ ಸಲಹೆ ಮೇರೆಗೆ ಅಂಬುಲೆನ್ಸ ಮೇಲೆ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ‘ಅರಣ್ಯ ಸಚಿವರ ಟಿಪ್ಪಣಿಯಿಂದ ಕಾನೂನು ಉಲ್ಲಂಘನೆ’

ಕಾರಿನ ಚಾಲಕ ತೆರ್ನಮಕ್ಕಿಯ ಕೆರೆಮನೆ ನಿವಾಸಿ ರಾಮ ಶುಕ್ರ ನಾಯ್ಕ (೪೮) ವಿರುದ್ಧ ಜಯಾ ನಾಯ್ಕ ದೂರು ದಾಖಲಿಸಿದ್ದಾರೆ. ಗಂಡನ ಜೊತೆ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡನ ಆರೈಕೆಯಲ್ಲಿ ಇದ್ದುದರಿಂದ ಮತ್ತು ಕಾನೂನು ಜ್ಞಾನ ಇಲ್ಲದೇ ಇರುವುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿ ತಿಳಿಸಿದ್ದಾರೆ.