ಭಟ್ಕಳ(bhatkal news): ತಾಲೂಕು ಆಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ (independence day) ಹಿನ್ನೆಲೆಯಲ್ಲಿ ಹರ್ ಘರ್ ತಿರಂಗ (Har Ghar Tiranga) ಕಾರ್ಯಕ್ರಮಕ್ಕೆ ಮಂಗಳವಾರ ತಹಶೀಲ್ದಾರ ನಾಗರಾಜ ನಾಯ್ಕಡ ಚಾಲನೆ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿಯಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಹರ್ ಘರ್ ತಿರಂಗ (Har Ghar Tiranga) ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ, ಗ್ರಾಮೀಣ ಭಾಗದಲ್ಲೂ ಎಲ್ಲಾ ಗ್ರಾಮ ಪಂಚಾಯತ ಮಟ್ಟದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದೇವೆ. ಅದೇ ರೀತಿ ನಮ್ಮ ತಾಲೂಕಿನಲ್ಲಿ ಎಲ್ಲಾ ನೌಕರರು ಹಾಗೂ ಸಾರ್ವಜನಿಕರ ಸಹಾಯದಿಂದ ಹರ್ ಘರ್ ತಿರಂಗ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಇದನ್ನೂ ಓದಿ : ಯೂತ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆ
ತಾಲೂಕು ಪಂಚಾಯತ ಪ್ರಭಾರ ಇಒ ರಾಜೇಶ ಮಹಾಲೆ ಮತ್ತಿತರರು ಇದ್ದರು. ತಾಲೂಕು ಆಡಳಿತ ಸೌಧದಿಂದ ಹೊರಟ ಬೈಕ್ ಜಾಥಾ ಭಟ್ಕಳ ಪುರಸಭೆ, ಮಾರ್ಕೆಟ್ ಮಾರ್ಗವಾಗಿ ಪುನಃ ತಾಲೂಕು ಆಡಳಿತ ಸೌಧಕ್ಕೆ ಬಂದು ಮುಕ್ತಾಯಗೊಂಡಿತು.