ಭಟ್ಕಳ : ಇಲ್ಲಿನ ಶಂಶುದ್ದೀನ್ ವೃತ್ತದ ಬಳಿ ಬೆಳಿಗ್ಗೆ ಅತಿಯಾದ ವಾಹನದಟ್ಟಣೆಯಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಆಸರಕೇರಿ ಪೊಲೀಸ್ ಅಧೀಕ್ಷಕರಿಗೆ ಬಹಿರಂಗ ಪತ್ರ (open letter) ಬರೆದಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ…
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗೌರವಾನ್ವಿತ ಪೊಲೀಸ್ ಅಧೀಕ್ಷಕರು, ಉತ್ತರಕನ್ನಡ ಜಿಲ್ಲೆ…
ಭಟ್ಕಳ ಮುಖ್ಯ ವೃತ್ತದಲ್ಲಿ ಬೆಳಿಗ್ಗೆ ೮.೩೦ ರಿಂದ ೯.೩೦ರವರೆಗೆ ಅತಿಯಾದ ವಾಹನ ದಟ್ಟಣೆ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ನೌಕರಸ್ಥರು, ಸಾರ್ವಜನಿಕರ ಓಡಾಟ ಹೆಚ್ಚಿರುವುದರಿಂದ ಆ ಸಮಯದಲ್ಲಿ ಟ್ರಾಪಿಕ್ ನಿರ್ವಹಣೆ ಮಾಡಲು ಎರಡರಿಂದ ಮೂರು ಸಿಬ್ಬಂದಿ ಅವಶ್ಯಕತೆ ಇರುತ್ತದೆ. ಈಗಾಗಲೇ ಹಲವು ಬಾರಿ ವಿಡಿಯೋ ಮಾಡಿ ಮೌಖಿಕವಾಗಿ ಇಲಾಖೆಗೆ ತಿಳಿಸುತ್ತಾ ಬಂದಿದ್ದರೂ, ಮಾಹಿತಿ ನೀಡಿದ ಕೆಲವು ದಿನ ಕೆಲವು ಸಿಬ್ಬಂದಿ ಟ್ರಾಪಿಕ್ ನಿರ್ವಹಿಸಲು ತಮ್ಮನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುತ್ತಾರೆ. ಇನ್ನೂ ಕೆಲವು ಸಿಬ್ಬಂದಿ, ಸಮಯಕ್ಕೆ ಸರಿಯಾಗಿ ಅಂದರೆ ೮.೩೦ ಕ್ಕೆ ಮುಖ್ಯವೃತ್ತದಲ್ಲಿ ಗೈರಾಗಿರುವುದು, ಲೇಟಾಗಿ ಅಂದರೆ ೯ ಗಂಟೆಯ ನಂತರ ಬರುವುದರಿಂದ ವಾಹನ ಸವಾರರು ಹಾಗೂ ಶಾಲಾ ಕಾಲೇಜು ಮಕ್ಕಳು ರಸ್ತೆ ದಾಟಲು ಪರದಾಡುವಂತಾಗುತ್ತದೆ.
ವಿಡಿಯೋ ಸಹಿತ ಇದನ್ನೂ ಓದಿ : ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಚಾಲನೆ
ಇನ್ನೂ ಕೆಲವು ಸಿಬ್ಬಂದಿಗೆ ಮುಖ್ಯ ವೃತ್ತದಲ್ಲಿ ತಮ್ಮ ಕರ್ತವ್ಯ ಎನೆಂಬುದೇ ಗೊತ್ತಿಲ್ಲ. ವಾಹನ ದಟ್ಟಣೆಯಿಂದ ರಸ್ತೆ ದಾಟಲು ವಾಹನ ಸವಾರರು ಹಾಗೂ ವಿದ್ಯಾರ್ಥಿಗಳು ಪರದಾಡುತ್ತಿದ್ದರೂ ತಮಗೆ ಸಂಬಂಧವೇ ಇಲ್ಲವೆನ್ನುವಂತೆ ಸಿಬ್ಬಂದಿ ನಿಂತಲ್ಲಿಂದ ಅಲ್ಲಾಡದಂತೆ ನಿಂತಿರುತ್ತಾರೆ.
ಇದನ್ನೂ ಓದಿ : ಯೂತ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆ
ಸಿಬ್ಬಂದಿಗೆ ಬೆಳಗ್ಗಿನ ೮.೩೦ ರಿಂದ ೯.೩೦ರವರೆಗಿನ ಸಮಯ ಹಾಗೂ ಸಂಜೆ ೩.೩೦ ರಿಂದ ೫ ಗಂಟೆಯ ಸಮಯ ಹಾಗೂ ಶನಿವಾರ ಮಧ್ಯಾಹ್ನದ ೧೨.೩೦ ರಿಂದ ೧.೩೦ ರ ಸಮಯದಲ್ಲಿ ಭಟ್ಕಳ ಮುಖ್ಯ ಸರ್ಕಲ್ ನ ಟ್ರಾಪಿಕ್ ನಿರ್ವಹಣೆಯ ಅವಶ್ಯಕತೆಯ ಬಗ್ಗೆ SOP (Standard Operating Procedures) ಮನದಟ್ಟು ಮಾಡುವುದು ಉತ್ತಮ.
ಇದನ್ನೂ ಓದಿ : ನಾಳೆ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ
ಇಂದು ಬೆಳಗ್ಗಿನ ಘಟನೆಯೇ ಜೀವಂತ ಉದಾಹರಣೆ: ಇಂದು ಸಿಬ್ಬಂದಿ ಲೇಟಾಗಿ ಬಂದ ಪರಿಣಾಮ, ೯ ಗಂಟೆಗೆ ಶಾಲಾ ಮಕ್ಕಳನ್ನು ಒಯ್ಯುತ್ತಿದ್ದ ರಿಕ್ಷಾ ಹಾಗೂ ಇನ್ನೊಂದು ಕಡೆಯಿಂದ ಬಂದ ರಿಕ್ಷಾ ಮದ್ಯೆ ಘರ್ಷಣೆಯಾಗಿ ಟ್ರಾಪಿಕ್ ಜಾಮ್ ಗೆ ಕಾರಣವಾಯಿತು. ಒಂದೊಮ್ಮೆ ಸಿಬ್ಬಂದಿ ೮.೩೦ ಕ್ಕೆ ಬಂದು ಸರಿಯಾಗಿ ಟ್ರಾಪಿಕ್ ನಿರ್ವಹಣೆಯ ಕರ್ತವ್ಯ ಮಾಡಿದ್ದರೆ, ಇವತ್ತು ಎರಡು ರಿಕ್ಷಾ ಮಧ್ಯ ಘರ್ಷಣೆಗೆ ಅವಕಾಶವಾಗುತ್ತಿರಲಿಲ್ಲ.
ಇದನ್ನೂ ಓದಿ : ರಂಗಾಯಣಗಳಿಗೆ ನಿರ್ದೇಶಕರ ನೇಮಕ
ದಯವಿಟ್ಟು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ದೇಶನವನ್ನು ನೀಡಬೇಕಾಗಿ ಸಾಮಾಜಿಕ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇವೆ. ಶಾಲಾ ಕಾಲೇಜುಗಳಿಗೆ ಹೋಗಲು ರಸ್ತೆ ದಾಟಲು ಪರದಾಡುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಪರವಾಗಿ ವಿನಂತಿಸುತ್ತಿದ್ದೇನೆ.
ಧನ್ಯವಾದಗಳು,
ಶ್ರೀಕಾಂತ ನಾಯ್ಕ, ಭಟ್ಕಳ (ಮಾಜಿ ಸೈನಿಕ)
ಬಿಜೆಪಿ ಜಿಲ್ಲಾ ಕಾರ್ಯದರ್ಶಿ.
ಬಹಿರಂಗ ಪತ್ರದ (open letter) ಜೊತೆ ಬೆಳಗಿನ ಘಟನೆ ವಿಡಿಯೋ ಲಗತ್ತಿಸಿದ್ದಾರೆ. ಆ ವಿಡಿಯೋ ಭಟ್ಕಳಡೈರಿಯ ಇನ್ಸ್ಟಾಗ್ರಾಂ, ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಿಸಬಹುದಾಗಿದೆ.