ಭಟ್ಕಳ : ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ (installation) ಸಮಾರಂಭವು ಸೋಮವಾರದಂದು ಭಟ್ಕಳದ ಅಮೀನಾ ಪ್ಯಾಲೇಸ್ ಸಭಾಂಗಣದಲ್ಲಿ ಜರುಗಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪದಗ್ರಹಣ (installation) ಅಧಿಕಾರಿ ರೋಟರಿ ಜಿಲ್ಲೆ ೩೧೭೦ರ ಮಾಜಿ ಜಿಲ್ಲಾ ಸಹಾಯಕ ಗವರ್ನರ್ ಡಾ. ಅನಂತಮೂರ್ತಿ ಶಾಸ್ತ್ರಿ ನೂತನ ಅಧ್ಯಕ್ಷ ಇಶ್ತಿಯಾಕ ಹಸನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಜಿಲ್ಲಾ ಸಹಾಯಕ ಗವರ್ನರ್ ಮಾನ್ವೆಲ್ ಸ್ಟಿಫೆನ್ ರೋಡ್ರಿಗೀಸ್ ಜಿಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ : ಪೊಲೀಸ್ ಅಧೀಕ್ಷಕರಿಗೊಂದು ಬಹಿರಂಗ ಪತ್ರ

ಭಟ್ಕಳ ತಾಲೂಕಿನಲ್ಲಿ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೈಮೂನಾ ಅಜೈಬ್ ರನ್ನು ಪಾಲಕರ ಸಹಿತ ಗೌರವಿಸಲಾಯಿತು. ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಶಿಕ್ಷಣ ಪಡೆದ ನವಾಯತ್ ಕಾಲೋನಿಯ ಅಂಜುಮಾನ್ ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆಗೆ ಗೌರವ ಪ್ರಶಸ್ತಿ ನೀಡಲಾಯಿತು. ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ೫ ದಶಕಗಳಿಂದ ಸೇವೆ ಸಲ್ಲಿಸಿರುವ ಡಾ. ಸುರೇಶ ವಿ ನಾಯಕ, ೩೪ ವರ್ಷಗಳಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಭಟ್ಕಳದ ಹಲವಾರು ಯುವಕರನ್ನು ಕ್ರೀಡಾಪಟುವಾಗಿಸಿದ ಮಹಮ್ಮದ ನಿಜಾಮ ಮಹಮ್ಮದ್ ಗೌಸ್ ಮುಮ್ಮಿಗಟ್ಟಿ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ : ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಚಾಲನೆ

೨೦೨೪-೨೫ನೇ ಸಾಲಿಗೆ ಆಯ್ಕೆಯಾದ ಇಶ್ತಿಯಾಕ್ ಹಸನ್-ಅಧ್ಯಕ್ಷ, ಡಾ. ಮೊಹಮ್ಮದ್ ಝಹೀರ ಕೋಲಾ-ಕಾರ್ಯದರ್ಶಿ, ಶ್ರೀನಿವಾಸ ಪಡಿಯಾರ-ಖಜಾಂಚಿ ಸಹಿತ ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.

ಇದನ್ನೂ ಓದಿ : ಯೂತ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆ

ನಿರ್ಗಮನ ಅಧ್ಯಕ್ಷ ಡಾ.ಎಂ.ಎ.ಬಾವಿಕಟ್ಟಿ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಶ್ರೀನಾಥ ಎಸ್ ಪೈ ವರದಿ ವಾಚಿಸಿದರು. ಹಿರಿಯ ರೋಟೇರಿಯನ್ ರಾಜೇಶ ನಾಯಕ ನಿರೂಪಿಸಿದರು, ಕಾರ್ಯದರ್ಶಿ ಡಾ. ಮೊಹಮ್ಮದ ಝಹೀರ ಕೋಲಾ ವಂದಿಸಿದರು. ರೋಟರಿ ಪ್ರಮುಖರಾದ ಡಾ. ಗೌರೀಶ ಪಡುಕೋಣೆ, ಶಾಖೀರ, ನಜೀರ ಕಾಶಿಂಜಿ, ರವಿ ನಂಬಿಯಾರ, ಪ್ರಶಾಂತ ಕಾಮತ, ರೋಟರಾಕ್ಟ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಸಮಾಜ ಸೇವಕರು, ಪಾಲಕರು, ಭಟ್ಕಳದ ನಾಗರಿಕರು ಉಪಸ್ಥಿತರಿದ್ದರು.