ಭಟ್ಕಳ: ಮಣ್ಕುಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶಿವಾನಂದ ಗ್ಯಾರೇಜ್ ಹಾಗೂ ಮೂಕಾಂಬಿಕಾ ಭಾರತ ಗ್ಯಾಸ್ ಏಜೆನ್ಸಿ ನಲ್ಲಿ ನಡೆದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಬಂಧಿಸುವಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಡಿಯೋ ನೋಡಿ : https://fb.watch/qe7m_1xtLk/?mibextid=Nif5oz
ಕಳ್ಳತನದ ಪ್ರಮುಖ ಆರೋಪಿ ನಗರದ ಕಿದ್ವಾಯಿ ರಸ್ತೆಯ ಬಟ್ಟ ಕಾವ್ ಕ್ರಾಸ್ ನಿವಾಸಿ ಮೊಹ್ಮದ ರಹಿಕ್ ಎಂದು ತಿಳಿದು ಬಂದಿದೆ. ಇದಕ್ಕೂ ಮೊದಲು ಕುಂದಾಪುರ ಮೂಲದ ಆರೋಪಿ ಮೊಹ್ಮದ್ ಸಫಾದ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು ಬಳಿಕ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾನೆ.
ಇದನ್ನೂ ಓದಿ : ವೀರ ಸಾವರ್ಕರ ನಾಮಫಲಕ, ಭಗವಾಧ್ವಜ ತೆರವು – ಪಿಡಿಒ ವಿರುದ್ದ ಧರಣಿ ಕುಳಿತ ಪಂಚಾಯತ ಸದಸ್ಯರು
ಕಳೆದ ಡಿಸೆಂಬರ್ 2 ರ ಮಧ್ಯರಾತ್ರಿ ಮಣ್ಕುಳಿಯ ಶಂಕರ ಶೆಟ್ಟಿ ಮಾಲೀಕತ್ವದ ಗ್ಯಾರೇಜ್ ನಲ್ಲಿ ಒಳ ನುಗ್ಗಿದ ಆರೋಪಿಗಳು ಕಪಾಟನ್ನು ಒಡೆದು ಅಲ್ಲಿದ್ದ ಸುಮಾರು 1.40 ಲಕ್ಷ ರೂ. ನಗದು ಹಾಗೂ ಸ್ಯಾಮಸಂಗ್ ಗೆಲಾಕ್ಸಿ ಮೊಬೈಲ್ ಪೋನ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಇವರು ಮಾಡಿದ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು
ಮರುದಿನ ಜನವರಿ 3 ರಂದು ದಿನಕರ ವಿಠಲ್ ಕಿಣಿ ಮಾಲೀಕತ್ವದ ಮೂಕಾಂಬಿಕಾ ಭಾರತ್ ಗ್ಯಾಸ್ ಏಜೆನ್ಸಿ ಕಳ್ಳತನ ಮಾಡಿ 5 ಲಕ್ಷ ಕ್ಕೂ ಅಧಿಕ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದು ಈ ಕಳ್ಳತನದ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಎರಡೂ ಪ್ರಕರಣ ದಾಖಲಿಸಿಕೊಂಡ ಭಟ್ಕಳ ನಗರ ಠಾಣೆಯ ಪೊಲೀಸರು ಓರ್ವ ಆರೋಪಿಯನ್ನು ಕಳೆದ ಕೆಲ ದಿನಗಳ ಹಿಂದೆ ಬಂಧಿಸಿದ್ದರು. ನಂತರ ಆರೋಪಿ ಜಾಮೀನು ಪಡೆದು ಹೊರಗೆ ಬಂದಿದ್ದ. ಆದರೆ ಕಳ್ಳತನದ ಮುಖ್ಯ ಆರೋಪಿ ಮೊಹ್ಮದ ರಹಿಕ್ ಗಾಗಿ ಪೊಲೀಸರು ಬಲೆ ಬೀಸಿದ್ದರು. ಭಟ್ಕಳದ ಖಾಸಗಿ ಹೋಟೆಲ್ ಮುಂಭಾಗದಲ್ಲಿರುವ ಟೀ ಶಾಪ್ ಗೆ ಕಾರಿನಲ್ಲಿ ಬಂದ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.