ಭಟ್ಕಳ(Bhatkal): ದೇಶಾದ್ಯಂತ ಇಂದು ಎಲ್ಲೆಡೆ ರಾಷ್ಟ್ರ ಧ್ವಜಾರೋಹಣ (National flag) ನೆರವೇರಿಸಿ ರಾಷ್ಟ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದರೆ ಇಲ್ಲೊಂದು ರಾಷ್ಟ್ರೀಕೃತ ಬ್ಯಾಂಕ್ (nationalised bank)ನಲ್ಲಿ ಧ್ವಜಾರೋಹಣ(flag hosting) ನೆರವೇರಿಸದೆ ದೇಶಕ್ಕೆ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಘಟನೆ ನಡೆದಿರುವುದು ಯಾವುದೇ ಹಳ್ಳಿ ಅಥವಾ ಕುಗ್ರಾಮದಲ್ಲಲ್ಲ. ಭಟ್ಕಳ ತಾಲೂಕಿನ ಶಿರಾಲಿಯಲ್ಲಿರುವ ಕೆನರಾ ಬ್ಯಾಂಕ್ (canara bank) ಶಾಖೆಯಲ್ಲಿ ಧ್ವಜಾರೋಹಣ ನೆರವೇರಿಸದೆ ದೇಶಕ್ಕೆ ಅಗೌರವ ತೋರಿದ್ದಾರೆ. ಇಂದು ಬ್ಯಾಂಕ್ ಗೆ ವ್ಯವಸ್ಥಾಪಕರಾಗಲಿ, ಸಿಬ್ಬಂದಿಯಾಗಲಿ ಯಾರೂ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಸುಸಜ್ಜಿತ ಬ್ಯಾಂಕ್ ಕಟ್ಟಡವಿದೆ. ಕಟ್ಟಡದ ಮುಂಭಾಗದಲ್ಲಿ ಧ್ವಜಾರೋಹಣ ಮಾಡುವುದಕ್ಕಾಗಿ ಕಟ್ಟೆ ಕೂಡ ಕಟ್ಟಿಸಲಾಗಿದೆ. ಆದರೂ ಸಹ ಇಂದು ಧ್ವಜಾರೋಹಣ ಮಾಡದೆ ಇರುವುದು ನಾಗರಿಕರಲ್ಲಿ ಬೇಸರ ಮೂಡಿಸಿದೆ.

ಇದನ್ನೂ ಓದಿ : ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ |

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಆಗಸ್ಟ್ ೧೩ರಿಂದ ೧೫ರ ತನಕ ಪ್ರತಿ ಮನೆ ಮನೆಯಲ್ಲಿಯೂ ರಾಷ್ಟ್ರ ಧ್ವಜ (National flag) ಹಾರಿಸಬೇಕು ಎನ್ನುವ ಉದ್ದೇಶಕ್ಕಾಗಿ ಕಾರ್ಯಕ್ರಮವನ್ನು ಜಾರಿಗೆ ತಂದು ಎಲ್ಲರಿಗೂ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಆದರೆ, ವಿದ್ಯಾವಂತರಾದ ಈ ರಾಷ್ಟ್ರೀಕೃತ ಬ್ಯಾಂಕ್ ನ ಮ್ಯಾನೇಜರ್ ಹಾಗೂ ಸಿಬ್ಬಂದಿ ಮಾತ್ರ ಧ್ವಜಾರೋಹಣ ಮಾಡೋಕೆ ಮನಸ್ಸು ಮಾಡದಿರುವುದು ರಾಷ್ಟ್ರಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೇಲಾಧಿಕಾರಿಗಳು ದೇಶಕ್ಕೆ ಅಗೌರವ ತೋರಿದ ಇಂತಹ ನೌಕರಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಶಿರಾಲಿಯ ಆಟೋ ಚಾಲಕ ಪರಶುರಾಮ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಭಟ್ಕಳದ ಹೆಮ್ಮೆಯ ಪುತ್ರ ನಾಗರಾಜ ದೇವಡಿಗ