ಭಟ್ಕಳ(bhatkal): ಇಲ್ಲಿನ ಕರಿಕಲ್ ಧ್ಯಾನ ಮಂದಿರದಲ್ಲಿ ಚಾತುರ್ಮಾಸ್ಯ (chathurmasya) ವ್ರತಾಚರಣೆಯ ೨೭ನೇ ದಿನ ವರಮಹಾಲಕ್ಷ್ಮಿ (Varamahalakshmi) ಪೂಜೆಯನ್ನು ಸಾವಿರಾರು ಮಹಿಳೆಯರು ಸೇರಿ ಶ್ರದ್ದಾಭಕ್ತಿಯಿಂದ ನೆರವೇರಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಳಿಗ್ಗೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಮಹಾಲಕ್ಷ್ಮಿ ದೇವಿಯ ಹೋಮ ಹವನ ಜರುಗಿತು. ನಂತರ ಧಾರ್ಮಿಕ ಕಾರ್ಯಕ್ರಮದ ವೇದಿಕೆಯ ಎದುರು ಅಲಂಕರಿಸಲ್ಪಟ್ಟಿದ್ದ ಮಹಾಲಕ್ಷ್ಮಿ ದೇವಿಯ ಮೂರ್ತಿಗೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ ಅವಕಾಶ ನೀಡಲಾಯಿತು.
ಇದನ್ನೂ ಓದಿ : ಆಗಸ್ಟ್ ೧೬ರಂದು ವಿವಿಧೆಡೆ ಅಡಿಕೆ ಧಾರಣೆ
ವೇದಮೂರ್ತಿ ಕಾರ್ಕಳದ ಮಹೇಶ ಶಾಂತಿ ಪೌರೋಹಿತ್ಯದಲ್ಲಿ ವರಮಹಾಲಕ್ಷ್ಮಿ (Varamahalakshmi) ದೇವಿಗೆ ನೂರಾರು ಮಹಿಳೆಯರು ಸರತಿಯ ಸಾಲಿನಲ್ಲಿ ಕುಳಿತು ಸಂಕಲ್ಪ ನೆರವೇರಿಸಿ ಪೂಜೆ ಸಲ್ಲಿಸಿದರು. ನಂತರ ಶಿರಾಲಿಯ ಮಣ್ಣಹೊಂಡ ನಾಮಧಾರಿ ಕೂಟದ ಭಕ್ತರು ಆರ್. ಕೆ. ನಾಯ್ಕ ನೇತೃತ್ವದಲ್ಲಿ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿ ಒಂದು ದಿನದ ಸೇವಾ ಕಾರ್ಯದಲ್ಲಿ ಪಾಲ್ಗೊಂಡರು. ಮಹಾಪೂಜೆಯ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : ಐ.ಆರ್.ಬಿ. ಉಪೇಕ್ಷೆ; ವಿಎಸ್ಎಸ್ ಸ್ಪಂದನೆ
ಈ ಸಂದರ್ಭದಲ್ಲಿ ಚಾತುಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಶಿರಾಲಿ ಹಳೆಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಕೆ.ನಾಯ್ಕ, ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, ಚಾತುಮಾಸ್ಯ ಸಮಿತಿಯ ಸಂಚಾಲಕ ಕೃಷ್ಣ ಪ್ರಥ್ವಿ, ಗುರಮಠದ ಕಾರ್ಯದರ್ಶಿ ಡಿ.ಎಲ್.ನಾಯ್ಕ, ಪ್ರಮುಖರಾದ ಎಸ್.ಎಂ.ನಾಯ್ಕ, ಉದ್ಯಮಿ ಈರಪ್ಪ ಗರ್ಡಿಕರ ಸೇರಿದಂತೆ ಜಿಲ್ಲೆಯಿಂದ ಬಂದ ಹಲವು ನಾಮಧಾರಿ ಸಮಾಜದ ಪ್ರಮುಖರು ಗಣ್ಯರು, ಭಕ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಭಟ್ಕಳ ತಾಲೂಕು ಪದವಿ ಪೂರ್ವ ಕ್ರೀಡಾಕೂಟ ಆರಂಭ