ಹೊನ್ನಾವರ(Honnavar): ಲಾರಿ ಡಿಕ್ಕಿಯಾಗಿ (Lorry collision) ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ತಾಲೂಕಿನ ನಾಜಗಾರ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ(National Highway)ಯಲ್ಲಿ ಶುಕ್ರವಾರ ಸಂಜೆ ೫.೩೦ರ ಸುಮಾರಿಗೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೈಕ್ ಚಲಾಯಿಸುತ್ತಿದ್ದ ತಾಲೂಕಿನ ಮಾಳ್ಕೋಡು ನಿವಾಸಿ, ಅರ್ಚಕ ಜಯಂತ ಹನುಮಂತ ಅಂಬಿಗ (೩೩) ಮತ್ತು ಹಿಂಬದಿ ಸವಾರ ಶ್ರೀಧರ ಗಣಪತಿ ಅಂಬಿಗ ಗಾಯಗೊಂಡವರು. ಲಾರಿ ಚಾಲಕ ತಾಲೂಕಿನ ಹಿರೇ ಅಂಗಡಿಯ ಮುಸ್ಲಿಂಕೇರಿ ನಿವಾಸಿ ನೂರಹ್ಮದ್ ರಿಜ್ವಾನ್ ಸಾಬ್ ವಿರುದ್ಧ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಸರ್ಕಾರಿ ನೌಕರರ ಮೇಲೆ ಹಲ್ಲೆ, ದೂರು ದಾಖಲು
ಗುಡ್ಡ ಕುಸಿತ ಪ್ರದೇಶವಾಗಿರುವ ನಾಜಗಾರ ಕ್ರಾಸ್ ಹತ್ತಿರ ಒಂದು ಬದಿಯ ರಸ್ತೆಯನ್ನು ಬಂದ್ ಮಾಡಿ, ಇನ್ನೊಂದು ಬದಿಯ ರಸ್ತೆಯಲ್‌ಲಿ ಎರಡೂ ಬದಿಯ ವಾಹನವನ್ನು ಓಡಾಡಲು ಅನುವು ಮಾಡಿಕೊಡಲಾಗಿತ್ತು. ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಅತಿವೇಗದಿಂದ ಬರುತ್ತಿದ್ದ ಲಾರಿಯ ಚಾಲಕ ನಿರ್ಲಕ್ಷ್ಯತನದಿಂದ ಅಪಘಾತ ಸಂಭವಿಸಿದೆ ಎಂದು ದೂರಲಾಗಿದೆ.
ಇದನ್ನೂ ಓದಿ : ಬೆಂಗಳೂರಿನಿಂದ ಬಂದ ಕರಾವಳಿಗರಿಗೆ ಶಾಕಿಂಗ್ ನ್ಯೂಸ್
ಅರ್ಚಕ ಜಯಂತ ಅಂಬಿಗ ಚಲಾಯಿಸುತ್ತಿದ್ದ ಬೈಕ್ ಓವರ್‌ಟೇಕ್ ಮಾಡುವಾಗ ಘಟನೆ ನಡೆದಿದೆ. ಮುಂದಿನಿಂದ ವಾಹನ ಬರುತ್ತಿದ್ದುದನ್ನು ನೋಡಿ ಒಮ್ಮೇಲೆ ಲಾರಿಯನ್ನು ಎಡಬದಿಗೆ ಚಲಾಯಿಸಿದ್ದರಿಂದ ಲಾರಿ ಬೈಕ್‌ಗೆ ಡಿಕ್ಕಿಯಾಗಿದೆ (Lorry collision). ಸವಾರರು ಡಿವೈಡರ್ ಮೇಲೆ ಬಿದ್ದು ಗಾಯಗೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.