ಭಟ್ಕಳ: ಬಾಂಗ್ಲಾ ದೇಶದಲ್ಲಿ  ಹಿಂದುಗಳ ಮೇಲೆ ಅಮಾನುಷ ಹಾಗೂ ಬರ್ಬರವಾಗಿ ಕೊಲೆ ಸುಲಿಗೆ ಅತ್ಯಾಚಾರ ,ಹಾಗೂ ದೇವಸ್ಥಾನಗಳನ್ನು ಭಗ್ನಗೊಳಿಸಿದ ಬಾಂಗ್ಲಾದ ಮುಸ್ಲಿಮರ ನಡೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ (protest) ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ (protest) ಶಂಶುದ್ದೀನ್ ಸರ್ಕಲ್ ಸುತ್ತು ಹಾಕಿ ತಾಲೂಕು ಆಡಳಿತ ಸೌಧಕ್ಕೆ ಬಂದು ತಲುಪಿತು. ನಂತರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ವಿಡಿಯೋ‌ ಸಹಿತ ಇದನ್ನೂ ಓದಿ : ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಖಂಡಿಸಿ ಪ್ರತಿಭಟನೆ

ಈ ವೇಳೆ ಮಾತನಾಡಿದ ಹಿಂದೂ ಮುಖಂಡ ಕೃಷ್ಣ ನಾಯ್ಕ ಆಸರಕೇರಿ,  ಭಾರತದಲ್ಲಿ ಕೋಟ್ಯಂತರ ಬಾಂಗ್ಲಾ ಮುಸ್ಲಿಮರು ನುಸುಳಿಕೊಂಡು ವಾಸ ಮಾಡುತ್ತಿದ್ದಾರೆ. ಅವರನ್ನು ಓಡಿಸಲು ನಮಗೆ ಬಂದೂಕು ಅಥವಾ ತಲ್ವಾರ್ ಹಿಡಿದುಕೊಳ್ಳುವ ಅವ್ಯಶಕತೆ ಇಲ್ಲ. ದೊಣ್ಣೆ ಮತ್ತು ಪೊರಕೆ ಹಿಡಿದುಕೊಂಡು ಓಡಿಸಲು ಶುರು ಮಾಡಿದರೆ ಅವರಿಗೆ ವಾಸವಿರಲು ಎಲ್ಲಿಯೂ ಕೂಡ ಜಾಗವಿರಲ್ಲ, ಅಂತಹ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ :  ಬಾವಿಗೆ ಹಾರಿ ಯುವಕ ಸಾವಿಗೆ ಶರಣು

ಈಗ ಪ್ರಕಾರ ರೈ, ಭಾಗವನ್ ಎಲ್ಲಿದ್ದಾರೆ? ಏನಾಗಿದೆ ಇವರ ಬಾಯಿಗೆ. ಬಾಯಿ ಬಿಚ್ಚಿ ಮಾತನಾಡಿ. ನಿಮಗೆ ಇಲ್ಲಿ ವಾಸಿಸಲು ಜಾಗ, ಅನ್ನ, ನೀರು ನೀಡಿದ್ದೇವೆ, ಆದರೆ ನೀವು ಈ ದೇಶದ ಅನ್ನ ನೀರು ಕುಡಿದು ನಮ್ಮ ದೇಶದ ವಿರುದ್ದ ಮಾತನಾಡುತ್ತಿರ. ಇಷ್ಟ ಇದ್ದರೆ ನಮ್ಮ ದೇಶದಲ್ಲಿ ಇರಿ. ಇಲ್ಲವಾದರೆ ಭಾರತ ಬಿಟ್ಟು ತೊಲಗಿ ಎಂದು ಎಚ್ಬರಿಕೆ ನೀಡಿದರು.

ಇದನ್ನೂ ಓದಿ :  ಜೆಸಿಬಿ ನಿಲ್ಲಿಸಿದ್ದಕ್ಕೆ ಅವಾಚ್ಯ ಶಬ್ದಗಳ ಬೈಗುಳ

ಬಿಜೆಪಿ ಮಹಿಳಾ‌ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ ಮಾತನಾಡಿ, ಮಹಿಳೆಯರಿಗೆ ತುಂಬಾ ಸಂಯಮ, ಶಕ್ತಿ ದೇವರು ನೀಡಿದ್ದಾನೆ. ಮಹಿಳೆ ಶಾಂತ ಸ್ವರೂಪವಾಗಿಯೂ ಇರಬಹುದು. ಹಾಗೆಯೇ ಎದುರಿಸಿ ನಿಂತಾಗ ಕಾಳಿಯಂತೆ ಖಡ್ಗ ಹಿಡಿದು ಮುಂದೆ ಬರಬಹುದು ಎನ್ನುವುದಕ್ಕೆ ಸದ್ಯ ಬಾಂಗ್ಲಾ ದೇಶದ ಹಿಂದೂ ಮಹಿಳೆಯರು ಬೀದಿಗೆ ಇಳಿದಿರುವುದು
ಉದಾಹರಣೆಗೆಯಾಗಿದ್ದಾರೆ ಎಂದರು.

ಇದನ್ನೂ ಓದಿ : ಬಸ್‌ ಡಿಕ್ಕಿಯಾಗಿ ಬೈಕ್‌ ಸವಾರಗೆ ಗಾಯ

ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಮಾತನಾಡಿ, ಬಾಂಗ್ಲಾದೇಶದಲ್ಲಿ ಯಾವ ರೀತಿ ಮಾರಣಹೋಮ ನಡೆದಿದೆ ಎನ್ನುವುದು ನಮ್ಮ ಕಣ್ಣ ಮುಂದೆ ಇದೆ. ಆದರೆ ಎಷ್ಟೋ ಇಂತಹ ಘಟನೆಗಳನ್ನು ಇತಿಹಾಸದಲ್ಲಿ ಮುಚ್ಚಿ ಹಾಕಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಿಂದಾಗಿ ಹಾಗೂ ನಮ್ಮಲ್ಲಿರುವ ಹಿಂದುತ್ವದ ಶಕ್ತಿಯಿಂದಾಗಿ ಇತಿಹಾಸ ಒಂದೊಂದಾಗಿ ಹೊರ ಬರುತ್ತಿದೆ. ಈ ಘಟನೆಯಿಂದ ನಾವೆಲ್ಲ ಎಚ್ಚೆತ್ತುಕೊಳ್ಳದೇ ಇದ್ದರೆ ಇಂದು ಬಾಂಗ್ಲಾದೇಶಕ್ಕೆ ಆಗಿರುವ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಭಾರತಕ್ಕೂ ಆಗುವುದರಲ್ಲಿ ಯಾವ ಸಂದೇಹವಿಲ್ಲ ಎಂದರು.

ಇದನ್ನೂ ಓದಿ : ಮನೆಯಿಂದ ಹೋದ ಗಂಡ ನಾಪತ್ತೆ

ವಿಶ್ವ ಹಿಂದೂ ಪರಿಷತ್ ಹಿರಿಯ ಮುಖಂಡ ರಾಮಕೃಷ್ಣ ನಾಯ್ಕ ಮಾತನಾಡಿ, ಬಾಂಗ್ಲಾದೇಶ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಅಲ್ಲಿನ ಹಿಂದುಗಳನ್ನು ಮತಾಂಧರು  ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದ್ದಾರೆ. ಅಲ್ಲಿನ ಮಾತೆಯರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡುತ್ತಿದ್ದಾರೆ. ಆದರೆ ದುರಾದೃಷ್ಟ ಏನೆಂದರೆ ಅಲ್ಲಿ ಗಾಯಗೊಂಡ ಹಿಂದುಗಳಿಗೆ ಚಿಕಿತ್ಸೆ ನೀಡಲು ಅಲ್ಲಿನ ಆಸ್ಪತ್ರೆಗಳು ಹಿಂಜರಿಯುತ್ತಿವೆ. ಇದು ನಮಗೆಲ್ಲ ಎಚ್ಚರಿಕೆಯ ಗಂಟೆಯಾಗಿದೆ. ಬಾಂಗ್ಲಾದಲ್ಲಿ ಕಳೆದ ೭೦ ವರ್ಷದಲ್ಲಿ ೩೦% ಇದ್ದ ಹಿಂದೂಗಳ ಸಂಖ್ಯೆ ಈಗ ೭ ರಿಂದ ೮% ವರೆಗೆ ಇಳಿಕೆಯಾಗಿದೆ. ಎಲ್ಲೆಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತದೆಯೋ ಅಲ್ಲಲ್ಲಿ ಜಿಹಾದಿ ಹಾಗೂ ಮತಾಂಧರ ಆರ್ಭಟ ಹೆಚ್ಚಾಗುತ್ತಾ ಹೋಗಲಿದೆ. ಭಾರತದ ಸುಮಾರು ೭ ರಾಜ್ಯದಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲಿ ಹಿಂದೂಗಳು ಯಾವುದೇ ಧಾರ್ಮಿಕ ಕಾರ್ಯಕ್ರಮ ಮಾಡಿದರೆ ತಕರಾರು ಮಾಡುತ್ತಿದ್ದಾರೆ ಎಂದರು.