ಭಟ್ಕಳ(Bhatkal): ಕೋಲ್ಕತ್ತಾದ (Kolkata) ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿರೋ ಕೃತ್ಯವನ್ನು ಖಂಡಿಸಿ ಉತ್ತರ ಕನ್ನಡ (Uttarakannada) ಜಿಲ್ಲಾ ಬಿಜೆಪಿ (BJP) ಮಹಿಳಾ ಘಟಕ ಮೊಂಬತ್ತಿ ಹಚ್ಚಿ ಇಲ್ಲಿನ ಮುಠ್ಠಳ್ಳಿಯ ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನೆ (candle protest) ನಡೆಸಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಜೀವ ನೀಡಬೇಕಾದ ವೈದ್ಯರನ್ನು ಅಮಾನುಷವಾಗಿ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವದು ಮಾನವ ಸಂಕಲವೇ ತಲೆತಗ್ಗಿಸುವಂತೆ ಮಾಡಿದೆ. ಮಹಿಳಾ ಮುಖ್ಯಮಂತ್ರಿ ಇದ್ದೂ ಮಹಿಳೆಯರಿಗೆ ರಕ್ಷಣೆ ಇಲ್ಲದೆ ಇರುವದು ಶೋಚನೀಯ ಎಂದರು.
ವಿಡಿಯೋ ಸಹಿತ ಇದನ್ನೂ ಓದಿ : ಬಾಂಗ್ಲಾ ಹಿಂಸಾಚಾರ ಖಂಡಿಸಿ ಭಟ್ಕಳದಲ್ಲಿ ಪ್ರತಿಭಟನೆ
ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲೂ ಪರಿಸ್ಥಿತಿ ಭಿನ್ನವಿಲ್ಲ. ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಹಲವೆಡೆ ಪ್ರತಿದಿನ ಅತ್ಯಾಚಾರ, ಹತ್ಯೆಯ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕು. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಕೋಲ್ಕತ್ತಾದಲ್ಲಿ ಪರಿಸ್ಥಿತಿ ಹತೋಟಿ ಮೀರಿದ್ದು ಅಲ್ಲಿನ ಮುಖ್ಯಮಂತ್ರಿ ಕೂಡಲೇ ರಾಜಿನಾಮೆ ನೀಡಬೇಕು ಎಂದು ಶಿವಾನಿ ಶಾಂತಾರಾಮ ಆಗ್ರಹಿಸಿದರು.
ವಿಡಿಯೋ ಸಹಿತ ಇದನ್ನೂ ಓದಿ : ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಖಂಡಿಸಿ ಪ್ರತಿಭಟನೆ
ಬಿಜೆಪಿ ಜಿಲ್ಲಾ ಮುಖಂಡ ಸುಬ್ರಾಯ ದೇವಾಡಿಗ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ, ಕೊಲೆ, ಸುಲಿಗೆ ಪ್ರಕರಣಗಳು ಎಲ್ಲೆ ಮೀರುತ್ತಿವೆ. ಸ್ವಾತಂತ್ರ್ಯ ಬಂದು ೭೮ ವರ್ಷಗಳು ಕಳೆದರೂ ಮಹಿಳೆಯರು ಸ್ವತಂತ್ರವಾಗಿ ತಿರುಗಾಡುವ ಸನ್ನಿವೇಶ ಎದುರಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ : ಖಗೋಳ ನಮ್ಮ ಬದುಕಿನ ಕನ್ನಡಿ: ರಾಘವೇಶ್ವರ ಸ್ವಾಮೀಜಿ
ಬಳಿಕ ಮುಂಬತ್ತಿಯನ್ನು ಹಚ್ಚಿ ಸುಮಾರು ೧೦ ನಿಮಿಷಕ್ಕೂ ಅಧಿಕ ಕಾಲ ಮೌನ ಪ್ರತಿಬಟನೆ ನಡೆಸಿದರು (candle protest). ಮೊದಲು ಬಿಜೆಪಿ ಕಾರ್ಯಾಲಯದಿಂದ ಮುಠ್ಠಳ್ಳಿ ಚಿತ್ತರಂಜನ ವೃತ್ತವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಇದನ್ನೂ ಓದಿ : ಬಾವಿಗೆ ಹಾರಿ ಯುವಕ ಸಾವಿಗೆ ಶರಣು
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ, ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಹೆರೂರಕರ, ಸವಿತಾ ಗೊಂಡ, ಯಮುನಾ ನಾಯ್ಕ, ಪರಿಮಳಾ ಶೇಟ, ವಿಜಯಾ ನಾಯ್ಕ, ಇತರರು ಇದ್ದರು.
ಇದನ್ನೂ ಓದಿ : ಮನೆಯಿಂದ ಹೋದ ಗಂಡ ನಾಪತ್ತೆ