ಕುಮಟಾ(Kumta) : ಗಟಾರದಲ್ಲಿ ಬಿದ್ದು ಗಾಯಗೊಂಡ ಕುಡುಕನೋರ್ವ ಚಿಕಿತ್ಸೆಗೆ ಸ್ಪಂದಿಸದೆ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ (drunken died).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಾಲೂಕಿನ ದಿವಗಿ ಗ್ರಾಮದ ಜಡ್ಡಿಮೂಲೆಯ ಸುರೇಶ ರಾಮಕೃಷ್ಣ ದೇಶಭಂಡಾರಿ(೫೨) ಮೃತಪಟ್ಟವರು. ಕೂಲಿ ಕೆಲಸ ಮಾಡುತ್ತಿದ್ದ ಇವರು ವಿಪರೀತ ಸಾರಾಯಿ ಸೇವಿಸುವ ಚಟ ಹೊಂದಿದ್ದರು. ನಿನ್ನೆ ಶನಿವಾರ ಸಂಜೆ ೭.೩೦ರ ಸುಮಾರಿಗೆ ವಿಪರೀತ ಸಾರಾಯಿ ಕುಡಿದು ಮನೆಗೆ ಬರುತ್ತಿದ್ದಾಗ ಗಟಾರಕ್ಕೆ ಬಿದ್ದು ಗಾಯಗೊಂಡಿದ್ದರು. ಜಡ್ಡಿಮೂಲೆಯ ಎ೧ ಕಾರ್ ಗ್ಯಾರೇಜ್ ಹತ್ತಿರ ಆಯತಪ್ಪಿ ಗಟಾರದಲ್ಲಿ ಹೋಗಿ ಬಿದ್ದು ತಲೆಗೆ, ಕಾಲಿಗೆ ಗಾಯ ಮಾಡಿಕೊಂಡಿದ್ದರು.
ಇದನ್ನೂ ಓದಿ : ನಿವೃತ್ತರಾದ ಶಿಕ್ಷಕಗೆ ಪತ್ನಿ ಸಹಿತ ಸನ್ಮಾನ
ಗಾಯಗೊಂಡ ಅವರನ್ನು ಮನೆಗೆ ತಂದು ಉಪಚಾರ ಕೊಡಿಸಿ ನಂತರ ಕುಮಟಾ ತಾಲೂಕಾ ಆಸ್ಪತ್ರೆಗೆ ರಾತ್ರಿ ೯-೧೫ರ ಸುಮಾರಿಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ೧೦-೨೦ಕ್ಕೆ ಮೃತಪಟ್ಟಿದ್ದಾರೆ (drunken died). ಈ ಕುರಿತು ಮೃತನ ಸಹೋದರ ಪ್ರಭಾಕರ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ (case registered). ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಸಾರ್ವಜನಿಕರಿಗೆ ನಿರ್ಬಂಧ; ಸಚಿವ ಮಂಕಾಳ ವೈದ್ಯ ಪರಿಶೀಲನೆ