ಗೋಕರ್ಣ(Gokarna): ರಸ್ತೆಯ ಎಡಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ಕಾರು ಡಿಕ್ಕಿಯಾಗಿ (Car Accident) ಗಾಯಗೊಂಡ ಘಟನೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರವಿವಾರ ಬೆಳಿಗ್ಗೆ ೧೧.೩೦ರ ಸುಮಾರಿಗೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕುಮಟಾ (Kumta) ತಾಲೂಕಿನ ದುಬ್ಬನಶಶಿಯ ಸಕ್ಕುಬಾಯಿ ದತ್ತಾ ಜೋಶಿ (೭೬) ಗಾಯಗೊಂಡ ವೃದ್ಧೆ. ಗೋಕರ್ಣ ಮೇಲಿನಕೇರಿಯ ಶ್ರೀ ಮಾರುತಿ ಕಟ್ಟೆ ಹತ್ತಿರ ಶಿವಪ್ರಸಾದ ಲಾಡ್ಜ್ ಎದುರು ಅಪಘಾತ ನಡೆದಿದೆ. ಗೋಕರ್ಣ ಕಡೆಯಿಂದ ಮೇಲಿನಕೇರಿ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ (Car Accident). ಕಾರು ಚಾಲಕ ಕುಮಟಾ ತಾಲೂಕಿನ ಧಾರೇಶ್ವರದ ಸಂತೋಷ ರಾಮಾ ಪಟಗಾರ ವಿರುದ್ಧ ದೂರು ದಾಖಲಾಗಿದೆ. ಗೋಕರ್ಣ ಠಾಣೆ ಪೊಲೀಸ್ ಪೇದೆ ಶ್ರವಣಕುಮಾರ ಬಡಿಗೇರ ದೂರು ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.
ಇದನ್ನೂ ಓದಿ :ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಕುಡಿದರೆ ಜೋಕೆ!