ಕಾರವಾರ(Karwar) : ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಎದೆನೋವಿನಿಂದ ಮೃತಪಟ್ಟ (fisherman died) ಘಟನೆ ಇಂದು ಸೋಮವಾರ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರವಾರ ತಾಲೂಕಿನ ಅಮದಳ್ಳಿಯ ಬ್ರಹ್ಮದೇವವಾಡಾ ನಿವಾಸಿ ಯಶವಂತ ವೆಂಕಪ್ಪ
ಬೊಬ್ರುಕರ (೪೭) ಮೃತ ದುರ್ದೈವಿ. ಇವರು ನಿರ್ಮಲಾ ಪಿಶಿಂಗ್ ಬೋಟ್ ನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಇಂದು ಬೆಳಿಗ್ಗೆ ೮ ಗಂಟೆಯ
ಸಮಯಕ್ಕೆ ಎಂದಿನಂತೆ ಮೀನುಗಾರಿಕೆ ಕೆಲಸಕ್ಕೆ ಅಮದಳ್ಳಿಯಿಂದ ಮುದಗಾ ಬಂದರಿಗೆ ಹೋಗಿದ್ದರು.
ಇದನ್ನೂ ಓದಿ : ಅಂಜುಮನ್ ಮಹಿಳಾ ಪದವಿ ಕಾಲೇಜಿನಲ್ಲಿ ಡಿಸಿ ಲಕ್ಷ್ಮಿಪ್ರಿಯಾ
ಯಶವಂತ ಬೊಬ್ರುಕರ ಅವರು ಮುದಗಾ ಬಂದರ್ ಜಟ್ಟಿಯ ಹತ್ತಿರ ಇದ್ದಾಗ ಬೆಳಿಗ್ಗೆ ೧೦-೩೦ರ ಸಮಯಕ್ಕೆ ಆಕಸ್ಮಾತ ಎದೆನೋವು ಬಂದು ಕುಸಿದು ಬಿದ್ದಿದ್ದರು. ಅವರಿಗೆ ಉಪಚರಿಸಿ ಆಟೋ ರಿಕ್ಷಾದಲ್ಲಿ ಚಿಕಿತ್ಸೆಗೆ ಕಾರವಾರ ಕ್ರಿಮ್ಸ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಅವರು ಆಗಲೇ ಸಾವನ್ನಪ್ಪಿದ್ದಾರೆ (fisherman died) ಎಂದು ತಿಳಿಸಿದ್ದಾರೆ. ಬಗ್ಗೆ ತಿಳಿಸಿರುತ್ತಾರೆ. ಈ ಬಗ್ಗೆ ಕಾರವಾರ ಗ್ರಾಮೀಣ ಠಾಣೆಯಲ್ಲಿ ಮೃತರ ಸಹೋದರ ಸತ್ಯ ಬೊಬ್ರಕರ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ಆಗಸ್ಟ್ ೧೯ರಂದು ವಿವಿಧೆಡೆ ಅಡಿಕೆ ಧಾರಣೆ