ಕಾರವಾರ (Karwar) : ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫಡರೇಶನ್ ಅಧ್ಯಕ್ಷ, ಕಾರವಾರ ಚಿತ್ತಾಕುಲ ಗ್ರಾಮ ಪಂಚಾಯತ್ ಅಧ್ಯಕ್ಷ, ಪರ್ಶಿನ್ ಬೋಟ್ ಯೂನಿಯನ್ ಅಧ್ಯಕ್ಷ ರಾಜು ಎಲ್. ತಾಂಡೇಲ(೫೫) ಹೃದಯಾಘಾತದಿಂದ ತಡರಾತ್ರಿ ನಿಧನರಾಗಿದ್ದಾರೆ (passed away).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆರೋಗ್ಯವಾಗಿದ್ದ ಅವರಿಗೆ ತಡರಾತ್ರಿ ೧.೩೦ರ ಸುಮಾರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು (passed away).
ಇದನ್ನೂ ಓದಿ : ಮೂಲ ತಿಳಿದುಕೊಂಡರೆ ಬದುಕು ಪರಿಪೂರ್ಣ: ಶ್ರೀ
ಇಂದು ಮಂಗಳವಾರ ಬೆಳಿಗ್ಗೆ ೧೦ ಗಂಟೆಯಿಂದ ಸಾರ್ವಜನಿಕರಿಗೆ ರಾಜು ತಾಂಡೇಲ್ ರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಾರವಾರ ಸದಾಶಿವಗಡದ ಆಜಾದ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಕಾರವಾರ ಜಿಲ್ಲಾಸ್ಪತ್ರೆಯಿಂದ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ. ಅಲ್ಲಿಂದ ಕಾರವಾರ ಸದಾಶಿಗಡದ ಆಜಾದ್ ಮೈದಾನಕ್ಕೆ ತೆರಳಲಿದೆ. ಆಜಾದ್ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ನಮನದ ನಂತರ ಮೆರವಣಿಗೆ ಚಿತ್ತಾಕುಲ ಸೀಬಡ್ ೯ ಕಾಲನಿಯ ರಾಜು ತಾಂಡೇಲ್ ರ ಸ್ವಗೃಹಕ್ಕೆ ತೆರಳಲಿದೆ ಎಂದು ಮೀನುಗಾರರ ಸಮಾಜದ ಪ್ರಮುಖರು ತಿಳಿಸಿದ್ದಾರೆ. ಮೀನುಗಾರರ ಸಮಾಜದವರು, ಸಾರ್ವಜನಿಕರು ಅಂತಿಮ ನಮನದಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ.
ಇದನ್ನೂ ಓದಿ : ಭಾಷಣ ಸ್ಪರ್ಧೆಗೆ ಹೆಸರು ನೊಂದಾಯಿಸಲು ಕರೆ