ಭಟ್ಕಳ(Bhatkal): ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು  ೧೪೦೦ ರೂ. ನಗದು ಸಹಿತ ವಶಕ್ಕೆ (Arrested) ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ (Case Registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಂದರ್‌ ರಸ್ತೆಯ ಎರಡನೇ ಕ್ರಾಸ್‌ ಕೋಕ್ತಿನಗರದ ನಿವಾಸಿ ಪ್ರಶಾಂತ ದೇವೇಂದ್ರ ನಾಯ್ಕ (೪೨) ಆರೋಪಿ. ಇವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣ ಪಡೆದು ಓಸಿ, ಮಟಕಾ ಜೂಡಾಡುತ್ತಿದ್ದ ಬಗ್ಗೆ ಭಟ್ಕಳ ಶಹರ ಠಾಣೆಯ ಪೊಲೀಸ್‌ ಪೇದೆ ಸಚಿನ್‌ ಪವಾರ ಠಾಣೆಗೆ ಮಾಹಿತಿ ನೀಡಿದ್ದರು. ಅದರ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ದಾಳಿ ಮಾಡಿದ್ದರು. ಬಂದರ ರಸ್ತೆಯಲ್ಲಿ ರಾಯಲ್ ಓಕ್ ಹೋಟೆಲ್ ಪಕ್ಕ ಇರುವ ಗೂಡಂಗಡಿ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಮಟಕಾ, ಓ.ಸಿ. ಜೂಜಾಟ  ಆಡಿಸುತ್ತಿರುವಾಗ ಪೊಲೀಸರ ದಾಳಿ ನಡೆದಿತ್ತು.

ಇದನ್ನೂ ಓದಿ :  ದೇಶಭಕ್ತಿ ಗೀತೆ ಹಾಗೂ ಭಾಷಣ ಸ್ಪರ್ಧೆ ಯಶಸ್ವಿ