ಭಟ್ಕಳ(Bhatkal): ಇಲ್ಲಿನ ಸಾರದಹೊಳೆ ಶ್ರೀ ಹನುಮಂತ ದೇವಸ್ಥಾನದ ಆವರಣದಲ್ಲಿ ಶ್ರೀ ನಾರಾಯಣ ಗುರುಗಳ (Narayanguru) ೧೭೦ನೇ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು(Celebration).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅರ್ಚಕ ಲೋಹಿತ್ ಎನ್. ಇವರಿಂದ ಶ್ರೀ ಗುರುಗಳಿಗೆ (Narayanguru) ವೈದಿಕ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಲಾಯಿತು. ನಂತರ ಸಾರದಹೊಳೆ ಹಳೆಕೋಟೆ ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಮುಖರು ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಸಾರದಹೊಳೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಕೆ.ನಾಯ್ಕ, ಉಪಾಧ್ಯಕ್ಷ ನಾಗೇಂದ್ರ ನಾಯ್ಕ, ಕಾರ್ಯದರ್ಶಿ ವಾಸು ನಾಯ್ಕ, ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ, ಸದಸ್ಯರಾದ ತಿರುಮಲ ನಾಯ್ಕ, ಆನಂದ ನಾಯ್ಕ, ಮಾದೇವ ನಾಯ್ಕ, ಕೃಷ್ಣ ನಾಯ್ಕ ಸಬ್ಬತ್ತಿ, ಈರಪ್ಪ ನಾಯ್ಕ ಮಠದಹಿತ್ಲು, ಈಶ್ವರ ನಾಯ್ಕ ಬೈಲೂರು ಮತ್ತಿತರಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : Murudeshwar/ ಮುರುಡೇಶ್ವರನಿಗೆ ಲಕ್ಷ ಭಸ್ಮಾರ್ಚನೆ