ಭಟ್ಕಳ(Bhatkal): ತಾಲೂಕಿನ ಹಡೀನ್ ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವಿ ಗಾರ್ಡ್ (V Guard) ಗೃಹೋಪಯೋಗಿ ವಸ್ತುಗಳ ಸಂಸ್ಥೆ ಸುಮಾರು ೬.೧೩ಲಕ್ಷ ಮೌಲ್ಯದ ಆಧುನಿಕ ತಂತ್ರಜ್ಞಾನದ ಶುದ್ಧ ಕುಡಿಯುವ ನೀರಿನ ಘಟಕ (Water unit) ದೇಣಿಗೆಯಾಗಿ ನೀಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾಲೇಜಿನ ಪ್ರಾಂಶುಪಾಲ ಗಜಾನನ ನಾಯ್ಕ ಅವರ ಕೋರಿಕೆಯ ಮೇರೆಗೆ ಭಟ್ಕಳದ ಪ್ರತಿಷ್ಟಿತ ಕಿರಣ್ ಎಂಟರ್ಪ್ರೈಸಸ್ ಮಾಲೀಕ ಕಿರಣ್ ಮಾನಕಾಮೆ ವಿ ಗಾರ್ಡ್ ಸಂಸ್ಥೆಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಸಂಸ್ಥೆ ದೊಡ್ಡ ಶುದ್ಧ ಕುಡಿಯುವ ನೀರಿನ ಘಟಕ (Water unit) ನೀಡಿದೆ. ಸಂಸ್ಥೆಯಿಂದಲೇ ತಂತ್ರಜ್ಞರು ಬಂದು ಘಟಕವನ್ನು ಅಳವಡಿಸಿದ್ದರು.

ಸಂಸ್ಥೆಯ ಹುಬ್ಬಳ್ಳಿ ವಲಯ ವ್ಯವಸ್ಥಾಪಕ ಪ್ರಕಾಶ್ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್, ಸರಕಾರಿ ಶಾಲೆಗಳಲ್ಲಿ ಇಂದು ಉತ್ತಮ ಶಿಕ್ಷಣ ದೊರೆಯುತ್ತಿದೆ. ಈ ಪದವಿ ಪೂರ್ವ ಕಾಲೇಜು ನೋಡಿದ ಮೇಲೆ ಸರ್ಕಾರಿ ಶಾಲೆಗಳ ಮೇಲೆ ಇನ್ನೂ ಹೆಚ್ಚಿನ ಭರವಸೆ ಬರುತ್ತಿದೆ. ಉತ್ತಮ ಕಾಳಜಿಯುಳ್ಳ ಪ್ರಾಚಾರ್ಯರು, ಉಪನ್ಯಾಸಕರು, ಅಭಿವೃದ್ಧಿ ಸಮಿತಿ ಹೊಂದಿರುವ ಈ ಕಾಲೇಜನ್ನು ಆಯ್ಕೆ ಮಾಡಿ ಕುಡಿಯುವ ನೀರಿನ ಘಟಕ ಕೊಟ್ಟಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ನಮ್ಮ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮದಡಿಯಲ್ಲಿ ಈ ಘಟಕ ನೀಡಿದ್ದೇವೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ : ದೇಶಕ್ಕೆ ದೈವಾನುಕೂಲ ಇಲ್ಲ : ರಾಘವೇಶ್ವರ ಶ್ರೀ 

ಕಾಲೇಜಿನ ಪ್ರಾಂಶುಪಾಲ ಗಜಾನನ ನಾಯ್ಕ ಮಾತನಾಡಿ, ಮುಂದೆಯೂ ಇಲ್ಲಿನ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿಟ್ಟು ಇನ್ನೂ ಏನಾದರೂ ಸಹಕಾರ ನೀಡಿದರೆ ಇನ್ನೂ ಉತ್ತಮ ಎಂದರು.  ಕಾರ್ಯಕ್ರಮದಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಭಾಸ್ಕರ ನಾಯ್ಕ, ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ, ಪತ್ರಕರ್ತ ವಿಷ್ಣು ದೇವಾಡಿಗ, ಕಿರಣ್ ಎಂಟರ್ಪ್ರೈಸಸ್ ಮಾಲೀಕ ಕಿರಣ್ ಮಾನಕಾಮೆ ಉಪಸ್ಥಿತರಿದ್ದರು. ಕಾಲೇಜಿನ ಹಿರಿಯ ಉಪನ್ಯಾಸಕರಾದ ಮಂಜುನಾಥ ನಾಯ್ಕ, ರಂಗ ಪಟಗಾರ, ಮಹೇಶ ಪಟಗಾರ, ರಾಜೇಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಎಲ್ಲಾ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಹಾಜರಿದ್ದರು.

ಇದನ್ನೂ ಓದಿ : ಸಾಮಾಜಿಕ ಪರಿಶೋಧನೆಯಿಂದ ಪಾರದರ್ಶಕತೆ