ಶಿವಮೊಗ್ಗ(Shivamogga): ಗಂಡ ಹೆಂಡತಿಯಾಗಿ ಚೆನ್ನಾಗಿದ್ದಾಗ ಹೆಂಡತಿ ಹೆಸರಿನಲ್ಲಿ ಕಾರು ಖರೀದಿಸಿದ ಗಂಡ, ಸಂಸಾರದಲ್ಲಿ ಬಿರುಕು ಬಿಟ್ಟಾಗ ನಕಲಿ ಸಹಿ ಬಳಸಿ (forged signature) ಆ ಕಾರನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿರುವ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ (case registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

೨೦೨೨ರಲ್ಲಿ ಟಾಟಾ ನೆಕ್ಸಾನ್ ವಾಹನವನ್ನು ಚಿತ್ರದುರ್ಗ ಜಿಲ್ಲೆಯ ಮಹೇಶ ಎಂಬುವರು ಹೆಂಡತಿಯ ಹೆಸರಿನಲ್ಲಿ ಖರೀದಿಸಿದ್ದರು. ತದನಂತರದಲ್ಲಿ ಮಹೇಶ್ ಮತ್ತು ಪತ್ನಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಬೇರೆಯಾಗಿದ್ದಾರೆ. ಮಹೇಶರ ಪತ್ನಿ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದಾರೆ. ೨೦೨೩ರಲ್ಲಿ ಮಹೇಶ ಅವರು ಆರ್ ಸಿ ಬುಕ್ ನಲ್ಲಿ ಪತ್ನಿಯ ನಕಲು ಸಹಿ (forged signature), ದಾಖಲಾತಿ ಸೃಷ್ಟಿಸಿ , ಎರಡನೇ ಪಾರ್ಟಿಯನ್ನಾಗಿ ಮಾಡಿಕೊಂಡು ತಮ್ಮ ಹೆಸರಿಗೆ ಕಾರನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.

ಇದನ್ನೂ ಓದಿ :  ಮಹಿಳೆಯ ಬೆತ್ತಲೆ ವಿಡಿಯೋ ಚಿತ್ರೀಕರಣ

ಈ ರೀತಿ ನಕಲಿ ದಾಖಲಾತಿ ಸೃಷ್ಠಿಸಿ ಆಸ್ತಿಗಳನ್ನೂ ವಂಚಿಸಲು ಪತಿ ಮುಂದಾಗಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಮಹಿಳೆಯು ಕಾರನ್ನು ತಮ್ಮ ಗಮನಕ್ಕೆ ತಾರದೆ, ನಕಲು ಸಹಿ ಮಾಡಿ ಬದಲಿಸಿಕೊಂಡು ವಂಚಿಸಿರುವ ಬಗ್ಗೆ ಮಹೇಶ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ :  ದೇಶಕ್ಕೆ ದೈವಾನುಕೂಲ ಇಲ್ಲ : ರಾಘವೇಶ್ವರ ಶ್ರೀ