ಭಟ್ಕಳ(Bhatkal): ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಂಬಂಧಿಸಿ ಕಾನೂನಿಗೆ ವ್ಯತಿರಿಕ್ತವಾಗಿ ಅಸಮರ್ಪಕ ಜಿ.ಪಿ.ಎಸ್. ಜರುಗಿಸಲಾಗಿದೆ. ಇದರ ವಿರುದ್ಧ ಅರಣ್ಯವಾಸಿಯ ಹಕ್ಕು ಸಮಿತಿಯ ಪ್ರಾಧಿಕಾರಕ್ಕೆ ಮೇಲ್ಮನವಿ (Appeal) ಸಲ್ಲಿಸಲಾಗಿದೆ. ಇದನ್ನು ಪುನರ್ ಪರಿಶೀಲಿಸಲು (Reconsideration) ಕಾನೂನಿನಲ್ಲಿ ಅವಕಾಶವಿದ್ದು, ತಕ್ಷಣ ಪುನರ್ ಪರಿಶೀಲಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಭಟ್ಕಳ ತಾಲೂಕಿನಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಪ್ರಾಧಿಕಾರಕ್ಕೆ ಸಲ್ಲಿಸಲಾದ ಅಸಮರ್ಪಕ ಜಿ.ಪಿ.ಎಸ್. ವಿರುದ್ಧ ಮೇಲ್ಮನವಿಯ (Appeal) ಸ್ವೀಕೃತಿ ಪ್ರತಿಯನ್ನು ಅರಣ್ಯವಾಸಿಗಳಿಗೆ ವಿತರಿಸಿ ಮಾತನಾಡಿದರು. ಅರಣ್ಯ ಹಕ್ಕು ಕಾಯಿದೆಯ ಮಂಜೂರಿ ಪ್ರಕ್ರಿಯೆಯಲ್ಲಿ ಅರಣ್ಯವಾಸಿಯ ಸಾಗುವಳಿ ನಿರ್ದಿಷ್ಟ ಗಡಿ ನಿರ್ಧರಿಸುವ ಉದ್ದೇಶದಿಂದ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿ ನೇತೃತ್ವದಲ್ಲಿ ಗ್ರಾಮ ಅರಣ್ಯ ಸಮಿತಿಯ ಪದಾಧಿಕಾರಿಗಳ ಕ್ಷಮಕ್ಷಮ ಜಿ.ಪಿ.ಎಸ್. ಕಾರ್ಯ ಜರುಗಿದ್ದವು ಎಂದು ಅವರು ಹೇಳಿದರು.
ಇದನ್ನೂ ಓದಿ : followup/ ಹೆಲ್ಮೆಟ್ ದಂಡ ಪ್ರಕರಣ; ಪಿಎಸ್ಐ ರಕ್ಷಣೆಗೆ ಮುಂದಾದ್ರಾ ಎಸ್ಪಿ?
ಸಭೆಯಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಹರಿ ನಾಯ್ಕ, ಓಂಕಾರ, ಶಬ್ಬೀರ್, ಖಯ್ಯುಮ್ ಕೋಲಾ, ಮಂಜುನಾಥ ನಾಯ್ಕ, ದೇವು ಗೋಮ ಮರಾಠಿ, ಅಣ್ಣಪ್ಪ ನಾಯ್ಕ, ಮಂಜುನಾಥ ಹಾಡುಹಳ್ಳಿ, ದತ್ತು ನಾಯ್ಕ, ಮೋಹನ್ ಸಣ್ಣು ಗೊಂಡ, ಮಂಗಲಾ ಶೆಟ್ಟಿ ಗುಡಿಹಿತ್ಲು ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ತಲೆನೋವಿನಿಂದ ಬಳಲುತ್ತಿದ್ದ ಮಹಿಳೆ ಸಾವು
ಶೇ ೭೨ರಷ್ಟು ಅಸರ್ಪಕ ಜಿ.ಪಿ.ಎಸ್: ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ೮೫,೭೫೭ ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದ್ದಾರೆ. ಅವುಗಳಲ್ಲಿ ಶೇ ೭೨ ರಷ್ಟು ಅರ್ಜಿಗಳಿಗೆ ಅಸಮರ್ಪಕ ಜಿ.ಪಿ.ಎಸ್ ಆಗಿವೆ. ಸಾಗುವಳಿ ಕ್ಷೇತ್ರ, ಬಾವಿ, ಅಂಗಳ, ಕೊಟ್ಟಿಗೆ, ಸಾಗುವಳಿ ಕ್ಷೇತ್ರ ಬಿಟ್ಟು ಜಿ.ಪಿ.ಎಸ್. ಆಗದಿರುವುದರಿಂದ ಅನ್ಯಾಯಕ್ಕೊಳಗಾದ ಅರಣ್ಯವಾಸಿಗಳು, ಹೋರಾಟಗಾರರ ವೇದಿಕೆಯ ನೇತೃತ್ವದಲ್ಲಿ ಮೇಲ್ಮನವಿ ಸಲ್ಲಿಸಿದ್ದರು ಎಂದು ಅದ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಇದನ್ನೂ ಓದಿ : ಕದಂಬ ನೌಕಾನೆಲೆಯ ನಿವೃತ್ತ ನೌಕರ ನಾಪತ್ತೆ