ಕುಮಟಾ(Kumta): ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ (Krishna Janmashtami) ನಿಮಿತ್ತ ಏರ್ಪಡಿಸಿದ್ದ ರಾಧಾಕೃಷ್ಣ(Radhakrishna) ಛದ್ಮವೇಶ ಪ್ರದರ್ಶನದಲ್ಲಿ ಬಾಲಮಂದಿರದ ಬಾಲ ವಿದ್ಯಾರ್ಥಿಗಳು ರಾಧಾಕೃಷ್ಣನ ವಿವಿಧ ವೇಷ ತೊಟ್ಟು ಗಮನ ಸೆಳೆದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬಾಲಕೃಷ್ಣ, ಬೆಣ್ಣೆ ಕಳ್ಳನ ರೂಪದ ಕೃಷ್ಣ, ಗೋಪಾಲಕೃಷ್ಣ, ಗೋ ರಕ್ಷಕ ಕೃಷ್ಣ, ಗೋಪಾಲಕನಾದ ಕೃಷ್ಣನ ವೇಷದಲ್ಲಿ ವಿದ್ಯಾರ್ಥಿಗಳು ಕಂಗೊಳಿಸುತ್ತ ಪುಟ್ಟ ಪುಟ್ಟ ಹೆಜ್ಜೆಯಿಟ್ಟರು. ಬಾಲಕಿಯರು ರಾಧೆಯ ಉಡುಪನ್ನು ತೊಟ್ಟು ಶ್ರೀ ಕೃಷ್ಣನ ಕುರಿತಾದ ಗೀತೆಗಳು ಶ್ಲೋಕಗಳನ್ನು ಹಾಡುವುದರ ಮೂಲಕ ಜನ ಮೆಚ್ಚುಗೆ ಪಡೆದರು. ಶಾಲೆಯ ಶಿಕ್ಷಕರು ಪಾಲಕರು ಇತರ ಪುಟ್ಟಮಕ್ಕಳ ಬಾಲಲೀಲೆಗೆ ಮರುಳಾದರು.
ಇದನ್ನೂ ಓದಿ : ಆರೋಗ್ಯ- ಆಯುರ್ವೇದಕ್ಕೆ ನಿಕಟ ಸಂಬಂಧ: ಶ್ರೀ