ಭಟ್ಕಳ(Bhatkal): ಈ ಹಿಂದೆ ಕೇರಳದ ದೇವಸ್ಥಾನದಲ್ಲಿ ದುರ್ಬಲ ವರ್ಗದವರಿಗೆ ಪ್ರವೇಶ ನಿಷೇಧವಿದ್ದ ಕಾಲದಲ್ಲಿ ಶ್ರೀ ನಾರಾಯಣ ಗುರುಗಳು(Narayan guru) ರಕ್ತರಹಿತ ಕ್ರಾಂತಿ ಮಾಡಿದ್ದರು. ದುರ್ಬಲ ವರ್ಗದವರಿಗಾಗಿಯೇ ಅನೇಕ ಶಿವನ ಮಂದಿರಗಳನ್ನು ಕಟ್ಟಿ ದೇಶದಲ್ಲಿ ಭ್ರಾತೃತ್ವ, ಸಹೋದರತೆ ಹಾಗೂ ಸಹಬಾಳ್ವೆಯ ಬಗ್ಗೆ ಅರಿವು ಮೂಡಿಸಿದ ಮಹಾನ ಪುರುಷರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ(BK Hariprasad) ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಭಟ್ಕಳದ ಕರಿಕಲ್ ಧ್ಯಾನ ಮಂದಿರದಲ್ಲಿ ಶ್ರೀ ನಾರಾಯಣ ಗುರುಗಳ ೧೭೦ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ದುರ್ಬಲ ವರ್ಗದವರ ಹೀನ ಸ್ಥಿತಿಯನ್ನು ಅರಿತ ನಾರಾಯಣ ಗುರುಗಳು ಅವರನ್ನು ಸಮಾಜಮುಖಿಗೆ ತರಲು ಬಹಳಷ್ಟು ಪ್ರಯತ್ನಮಾಡಿದರು. ಧರ್ಮದಲ್ಲಿ ಸಮಾನತೆ ಇಲ್ಲದ ಸಮಯದಲ್ಲಿ ಶ್ರೀ ಗುರುಗಳು ಯಾರ ವಿರುದ್ಧವೂ ಮಾತನಾಡದೆ ದುರ್ಬಲರಿಗೆ ಶಿಕ್ಷಣದ ಅರಿವು ಮೂಡಿಸುವ ಕೆಲಸ ಮಾಡಿ ಅವರನ್ನು ಶಿಕ್ಷಣವಂತರಾಗಿಸಲು ಬಹಳಷ್ಟು ಪ್ರಯತ್ನ ಮಾಡಿ ದಾರ್ಶನಿಕರಾದರು. ಕಂದಾಚಾರ, ದುಂದುವೆಚ್ಚಕ್ಕೆ ಶ್ರೀ ಗುರುಗಳು ವಿರೋಧಿಸಿದ್ದರು. ನಾರಾಯಣ ಗುರುಗಳ ಅನುಯಾಯಿಗಳು ಕೇವಲ ಗುರಮಂದಿರ ಕಟ್ಟಿದರಷ್ಟೇ ಸಾಲದು. ಜ್ಞಾನವನ್ನು ಹೆಚ್ಚಿಸಲು ಗ್ರಂಥಾಲಯಗಳನ್ನು ಸ್ಥಾಪಿಸಬೇಕು. ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಿಷ್ಟರಾಗಿ ಎಂಬ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ(BK Hariprasad) ಹೇಳಿದರು.

ಇದನ್ನೂ ಓದಿ :  ಗಮನಸೆಳೆದ ರಾಧಾಕೃಷ್ಣ ಛದ್ಮವೇಷ ಪ್ರದರ್ಶನ

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahmanand Saraswati Swamiji) ಮಾತನಾಡಿ, ನಾವು ನಮ್ಮ ಅಂತರಾಳವನ್ನು ಮೊದಲು ಪ್ರೀತಿಸಬೇಕು. ಹಾಗೆಯೇ ಸುತ್ತಮುತ್ತಲಿನವರನ್ನು ಪ್ರೀತಿಸುವ ಕೆಲಸ ಮಾಡಬೇಕಾಗಿದೆ. ನಾರಾಯಣ ಗುರುಗಳು ಯಾರನ್ನೂ ದ್ವೇಷಿಸದೆ ಪ್ರೀತಿಯಿಂದಲೇ ಎಲ್ಲರ ಮನ ಗೆದ್ದಿದ್ದಾರೆ. ನಾವು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕೆಲಸ ಮಾಡಬೇಕು ಎಂದರು.

ಇದನ್ನೂ ಓದಿ : ಆರೋಗ್ಯ- ಆಯುರ್ವೇದಕ್ಕೆ ನಿಕಟ ಸಂಬಂಧ: ಶ್ರೀ

ಪ್ರಾರಂಭದಲ್ಲಿ ಶ್ರೀ ನಾರಾಯಣ ಗುರುಗಳ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಭಟ್ಕಳ ಗುರುಮಠದ ದೇವಸ್ಥಾನದ ಅಧ್ಯಕ್ಷ ಅರುಣ ನಾಯ್ಕ, ಶಿರಾಲಿ ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ, ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ, ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ, ಮಂಜುನಾಥ ನಾಯ್ಕ, ಅಂಕೋಲಾ, ಚಾತುರ್ಮಾಸ್ಯ ಸಮಿತಿಯ ಸಂಚಾಲಕ ಪ್ರಥ್ವಿ ನಾಯ್ಕ ವೇದಿಕೆಯಲ್ಲಿದ್ದರು.

ಇದನ್ನೂ ಓದಿ :  ಜಿ.ಪಿ.ಎಸ್. ವಿರುದ್ಧದ ಮೇಲ್ಮನವಿ ಪುನರ್ ಪರಿಶೀಲನೆಗೆ ಒತ್ತಾಯ

ವೇದಿಕೆಯಲ್ಲಿ ಶ್ರೀ ನಾರಾಯಣ ಗುರುಗಳ ಬಗ್ಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶ್ರೀ ಗುರುಗಳಿಂದ ಬಹುಮಾನ ವಿತರಿಸಲಾಯಿತು. ಪ್ರಾರಂಭದಲ್ಲಿ ತಾಲೂಕು ಶ್ರೀ ನಾರಾಯಣಗುರು ಸಂಘದ ಸಂಚಾಲಕ ಮನಮೋಹನ ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ನಾರಾಯಣ ನಾಯ್ಕ ಹಾಗೂ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಹರುಳಿಸಾಲ್, ನಾಮಧಾರಿ ಕೂಟದವರಿಂದ ಸ್ವಾಮೀಜಿಯವರ ಪಾದಪೂಜೆ ಕಾರ್ಯಕ್ರಮ ನಡೆಯಿತು. ಭಟ್ಕಳದ ದೇವಾಡಿಗ ಸಮಾಜ, ಸಾಗರ, ದರ್ಮಸ್ಥಳ, ಸಿದ್ದಾಪುರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಸ್ವಾಮೀಜಿಗಳ ಮಂತ್ರಾಕ್ಷತೆ ಪಡೆದರು.

ಇದನ್ನೂ ಓದಿ : followup/ ಹೆಲ್ಮೆಟ್‌ ದಂಡ ಪ್ರಕರಣ; ಪಿಎಸ್‌ಐ ರಕ್ಷಣೆಗೆ ಮುಂದಾದ್ರಾ ಎಸ್ಪಿ?