ಭಟ್ಕಳ(Bhatkal): ಹೆಲ್ಮೆಟ್ ದಂಡ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ “ಭಟ್ಕಳ ಡೈರಿ” ನಡೆಸಿದ ರಿಯಾಲಿಟಿ ಚೆಕ್ (Reality Check) ವರದಿಗೆ ಜಯ ಸಿಕ್ಕಿದೆ. ಭಟ್ಕಳ ಶಹರ ಠಾಣೆ ಪಿಎಸೈ ಯಲ್ಲಪ್ಪ ಮಾದರ ಅವರನ್ನು ಅಮಾನತುಗೊಳಿಸಿ (Suspended), ಪೊಲೀಸ್ ಅಧೀಕ್ಷಕ ಎಂ.ನಾರಾಯಣ ಆದೇಶ ಹೊರಡಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪಿಎಸೈ ಯಲ್ಲಪ್ಪ ಮಾದರ ಅವರು ಹೆಲ್ಮೆಟ್ (helmet) ರಹಿತ ದ್ವಿಚಕ್ರ ವಾಹನ ಸವಾರರಿಂದ ವಸೂಲಿ ಮಾಡಿದ ದಂಡದ ಮೊತ್ತವನ್ನು ಚಿನ್ನದ ವ್ಯಾಪಾರಿಯೊಬ್ಬರ ಖಾತೆಗೆ ವರ್ಗಾಯಿಸುತ್ತಿದ್ದಾರೆ ಎಂಬ ಸಾರ್ವಜನಿಕರ ವ್ಯಾಪಕ ದೂರಿನ ಹಿನ್ನೆಲೆ “ಭಟ್ಕಳ ಡೈರಿ” ರಿಯಾಲಿಟಿ ಚೆಕ್ ನಡೆಸಿತ್ತು. ಹೆಲ್ಮೆಟ್ ಧರಿಸದೆ “ಭಟ್ಕಳ ಡೈರಿ” ವರದಿಗಾರ ಉದಯ ನಾಯ್ಕ ಬೈಕ್ ಚಲಾಯಿಸಿ ಪೊಲೀಸ್ ಠಾಣೆ ಎದುರಿನಿಂದ ಹೋಗುತ್ತಿದ್ದಾಗ, ದಂಡ ವಿಧಿಸಿದ ಪಿಎಸೈ ಯಲ್ಲಪ್ಪ ಮಾದರ ಚಿನ್ನದ ವ್ಯಾಪಾರಿಯ ಖಾತೆಗೆ ಹಣ ಕಳುಹಿಸಿದ್ದರು. ಆ ಮೂಲಕ ಸಾರ್ವಜನಿಕ ದೂರು ದೃಢವಾಗಿತ್ತು. ಇದನ್ನಾಧರಿಸಿ “ಭಟ್ಕಳ ಡೈರಿʼ ಕೈಗೊಂಡ ರಿಯಾಲಿಟಿ ಚೆಕ್ ವರದಿಯನ್ನು ಪ್ರಕಟಿಸಿತ್ತು. ಇದನ್ನಾಧರಿಸಿ ಹಲವು ಮಾಧ್ಯಮಗಳು ವರದಿ ಪ್ರಕಟಿಸಿದ್ದವು.
ಇದನ್ನೂ ಓದಿ : Reality check/ ಪೊಲೀಸ್ ಇಲಾಖೆ ಸಂಗ್ರಹಿಸಿದ ದಂಡದ ಮೊತ್ತ ಚಿನ್ನದ ವ್ಯಾಪಾರಿ ಖಾತೆಗೆ !?
ವರದಿಯನ್ನಾಧರಿಸಿ ತರಾತುರಿಯ ಸ್ಪಷ್ಟೀಕರಣ ನೀಡಿದ್ದ ಎಸ್ಪಿ ನಾರಾಯಣ ಎಂ. ಅವರ ಕ್ರಮವನ್ನು ಖಂಡಿಸಿ ಕೂಡ ಭಟ್ಕಳ ಡೈರಿ ವರದಿ(Followup) ಪ್ರಕಟಿಸಿತ್ತು. ಇದೀಗ ಎಸ್ಪಿ ನಾರಾಯಣ ಅವರು ಬೈಕ್ ಸವಾರರಿಂದ ದಂಡದ ಹಣವನ್ನು ಫೋನ್ ಪೇ ಮುಖಾಂತರ ಸಾರ್ವಜನಿಕರ ಖಾತೆಗೆ ವರ್ಗಾಯಿಸಿರುವುದು ಕಂಡುಬಂದಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಇಲಾಖಾ ನಿಯಮವನ್ನು ಉಲ್ಲಂಘಿಸಿದ್ದು ಕಂಡುಬಂದಿದ್ದರಿಂದ ಶಹರ ಠಾಣೆ ಪಿಎಸೈ ತನಿಖೆ-೧ರ ಯಲ್ಲಪ್ಪ ಮಾದರ ಅವರನ್ನು ಇಲಾಖಾ ವಿಚಾರಣೆ ಬಾಕಿಯಿರಿಸಿ ತಕ್ಷಣ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ನಾರಾಯಣ ತಿಳಿಸಿದ್ದಾರೆ.
ಇದನ್ನೂ ಓದಿ : followup/ ಹೆಲ್ಮೆಟ್ ದಂಡ ಪ್ರಕರಣ; ಪಿಎಸ್ಐ ರಕ್ಷಣೆಗೆ ಮುಂದಾದ್ರಾ ಎಸ್ಪಿ?
ವರದಿಗಾರನ ಹೇಳಿಕೆ ಪಡೆದ ಡಿವೈಎಸ್ಪಿ : ಪ್ರಕರಣದ ತನಿಖೆ ನಡೆಸುತ್ತಿರುವ ಭಟ್ಕಳ ಡಿವೈಎಸ್ಪಿ ಅವರಿಗೆ “ಭಟ್ಕಳ ಡೈರಿ” ಸಂಪೂರ್ಣ ಸಹಕಾರ ನೀಡುತ್ತಿದೆ. ರಿಯಾಲಿಟಿ ಚೆಕ್ ನಡೆಸಿದ್ದ “ಭಟ್ಕಳ ಡೈರಿ” ವರದಿಗಾರ ಉದಯ ನಾಯ್ಕ ಅವರ ಹೇಳಿಕೆ ಪಡೆಯಲು ತನಿಖೆ ನಡೆಸುತ್ತಿರುವ ಡಿವೈಎಸ್ಪಿ ಮಹೇಶ ಎಂ.ಕೆ. ಕರೆಯಿಸಿದ್ದರು. ಅದರಂತೆ ಇಂದು ಸೋಮವಾರ ಬೆಳಿಗ್ಗೆ ಡಿವೈಎಸ್ಪಿ ಕಚೇರಿಗೆ “ಭಟ್ಕಳ ಡೈರಿ” ವರದಿಗಾರ ಉದಯ ನಾಯ್ಕ ತೆರಳಿದ್ದರು.”ಭಟ್ಕಳ ಡೈರಿ” ವರದಿಗಾರ ಉದಯ ನಾಯ್ಕ ಅವರು ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಎಸ್ಪಿ ನಾರಾಯಣ ಅವರು ಪಿಎಸೈ ಯಲ್ಲಪ್ಪ ಮಾದರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : BK Hariprasad/ ಸಹಬಾಳ್ವೆಯ ಅರಿವು ಮೂಡಿಸಿದ್ದ ನಾರಾಯಣಗುರು
ಭಟ್ಕಳ ಡೈರಿ ವರದಿಗೆ ಸಿಕ್ಕ ಜಯ:
ಸಾರ್ವಜನಿಕರ ದೂರಿನ ಹಿನ್ನೆಲೆ “ಭಟ್ಕಳ ಡೈರಿ” ನಡೆಸಿದ “ರಿಯಾಲಿಟಿ ಚೆಕ್” ವರದಿಗೆ ಕೊನೆಗೂ ಜಯ ಸಿಕ್ಕಂತಾಗಿದೆ. ಪೊಲೀಸ್ ಇಲಾಖೆಗೆ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟದ ಬಗ್ಗೆ “ಭಟ್ಕಳ ಡೈರಿ” ವರದಿಯಲ್ಲಿ ಬೆಳಕು ಚೆಲ್ಲಿತ್ತು. ಕೊನೆಗೂ ಪೊಲೀಸ್ ಇಲಾಖಾ ತನಿಖೆ ಆರಂಭಗೊಂಡಿದ್ದು, ಪಿಎಸೈ ಅಮಾತನುಗೊಳ್ಳುವಂತಾಗಿದೆ. ಇದು “ಭಟ್ಕಳ ಡೈರಿ” ವರದಿಗೆ ದೊರೆತ ಜಯವಾಗಿದೆ. ಸಾರ್ವಜನಿಕ ಹಿತಾಸಕ್ತಿ ವರದಿಗೆ “ಭಟ್ಕಳ ಡೈರಿ” ಎಂದಿಗೂ ಮುಂಚೂಣಿಯಲ್ಲಿರಲಿದೆ. ಇದು “ಭಟ್ಕಳ ಡೈರಿ”ಯ ವಾಗ್ದಾನ.