ಭಟ್ಕಳ (Bhatkal) : ಕಾರಿಗೆ ಹಿಂಬದಿಯಿಂದ ಬೈಕ್‌ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು(Bike collision), ಕಾರು ಚಾಲಕನ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೊಂದಲವಾಯ್ತೆ? ಈ ಸುದ್ದಿ ಓದಿ….

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಿನ್ನೆ ರವಿವಾರ ರಾತ್ರಿ ೮.೩೦ರ ಸುಮಾರಿಗೆ ಬೆಣಂದೂರು ಕ್ರಾಸ್‌ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಭಟ್ಕಳ ಕಡೆಯಿಂದ ಗೊರಟೆ ಕಡೆಗೆ ಹೊರಟಿದ್ದ ಕಾರು ಇನ್ನೊಂದು ವಾಹನವನ್ನು ಓವರಟೇಕ್‌ ಮಾಡಿ, ರಸ್ತೆಯ ಎಡಬದಿಗೆ ಬಂದು ಗಣಪತಿ ಎಂಬುವವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್‌ ಮುಂದೆ ಒಮ್ಮೇಲೆ ಬ್ರೇಕ್‌ ಹಾಕಿದ್ದರಿಂದ ಬೈಕ್‌ ಕಾರಿಗೆ ಡಿಕ್ಕಿ ಹೊಡೆದಿದೆ (Bike Collision) ಎಂದು ದೂರಲಾಗಿದೆ.

ಇದನ್ನೂ ಓದಿ :  ಗೆಳೆಯನ ಮನೆಗೆ ಹೋದವ ಎದೆನೋವಿನಿಂದ ಸಾವು

ಈ ಅಪಘಾತದಲ್ಲಿ ಬೈಕ್‌ ಸವಾರ ಬೆಳಕೆ ಕಾನಮದ್ಲು ವಾಸಿ ಗಣಪತಿ ಕುಪ್ಪಯ್ಯ ಗೊಂಡ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಣಪತಿಯವರ ಕುತ್ತಿಗೆಗೆ, ಹಣೆಗೆ, ಗದ್ದಕ್ಕೆ ಹಾಗೂ ಎಡಗಾಲಿನ ಮೊಣಗಂಟಿಗೆ ಗಾಯಗಳಾಗಿವೆ. ಕಾರು ಚಾಲಕನ ವಿರುದ್ಧ ಗಾಯಾಳು ಗಣಪತಿಯವರ ಸಹೋದರ ಸುಕ್ರ ಗೊಂಡ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಪಿಎಸೈ ಯಲ್ಲಪ್ಪ ಅಮಾನತು – “ಭಟ್ಕಳ ಡೈರಿ” ವರದಿ ಫಲಶ್ರುತಿ