ಭಟ್ಕಳ(Bhatkal) : ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಸೇರಿದಂತೆ ೧.೨೫ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿ (House Theft) ಪರಾರಿಯಾಗಿರುವ ಘಟನೆ ಭಟ್ಕಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಿನ್ನೆ ಸೋಮವಾರ ಬೆಳಿಗ್ಗೆ ೯.೩೦ರಿಂದ ೧೦.೩೦ ರ ನಡುವಿನ ಅವಧಿಯಲ್ಲಿ ಘಟನೆ ನಡೆದಿದೆ. ತಾಲೂಕಿನ ಹೆಬಳೆಯ ಕೆಇಬಿ ಗ್ರಿಡ್‌ ಬಳಿಯ ಬೀಬಿ ಹಾಜಿರಾ ಕೋಂ ಬೀಜೂರು ಅಬ್ದುಲ್‌ ಮಲಿಯಾಳಿ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಮುಖ್ಯ ಬಾಗಿಲಿನ ಬೀಗ ಮುರಿದು ಕಳ್ಳರು ಮನೆಯ ಒಳಹೊಕ್ಕಿದ್ದಾರೆ. ೯ ಗ್ರಾಂ ತೂಕದ ಪೆಂಡೆಂಟ್‌ ಇರುವ ಬಂಗಾರದ ಚೈನ್‌ ಸರ, ೫೦ ಗ್ರಾಂ ತೂಕದ ೧ ಜೊತೆ ಬೆಳ್ಳಿಯ ಕಾಲು ಚೈನು,  ೭೦ ಸಾವಿರ ರೂ. ನಗದು ಮತ್ತು ರಿಯಲ್‌ ಮಿ ಆಂಡ್ರಾಯ್ಡ್‌ ಮೊಬೈಲ್‌ ಫೋನ್‌ ಕಳುವಾಗಿದೆ (House Theft) ಎಂದು ಬೀಬಿ ಹಾಜಿರಾ ದೂರಿನಲ್ಲಿ ತಿಳಿಸಿದ್ದಾರೆ (case registered). ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ (Investigation) ಕೈಗೊಂಡಿದ್ದಾರೆ.

ಇದನ್ನೂ ಓದಿ :ಶರಾವತಿ ಒಡಲು ಬಗೆಯಲು ಮುಂದಾದರೆ ಕಾನೂನು ಹೋರಾಟ