ಭಟ್ಕಳ (Bhatkal): ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಬೈಕೊಂದು ಡಿಕ್ಕಿ ಹೊಡೆದು ಗಾಯಪಡಿಸಿದ (Injured) ಘಟನೆ ತಾಲೂಕಿನ ಶಿರಾಲಿಯಲ್ಲಿ ನಡೆದಿದೆ. ನಿನ್ನೆ ಸಂಜೆ ೭.೧೫ರ ಸುಮಾರಿಗೆ ಶಿರಾಲಿ ಚೆಕ್‌ ಪೋಸ್ಟ್‌ ಬಳಿ ಈ ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಗುಳ್ಮಿ ಬಿಳಾಲಖಂಡ ನಿವಾಸಿಯಾಗಿರುವ ಎಲೆಕ್ಟ್ರಿಶಿಯನ್‌ ಮಹ್ಮದ್‌ ಮೀರಾ ತಂದೆ ಮಹ್ಮದ್‌ ಗೌಸ್‌ (೩೨) ಅಪಘಾತ ಪಡಿಸಿದ ಬೈಕ್‌ ಸವಾರ. ಶಿರಾಲಿ ನೀರಕಂಠದ ಕಾನಪಾಟಿಮನೆ ನಿವಾಸಿ ಚಂದ್ರ ನಾರಾಯಣ ನಾಯ್ಕ ಗಾಯಗೊಂಡವರು (Injured). ಇವರು ರಾಷ್ಟ್ರೀಯ ಹೆದ್ದಾರಿ (National Highway) ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬಂದ ಬೈಕ್‌ ಡಿಕ್ಕಿ ಹೊಡೆದಿದೆ. ಪಾದಚಾರಿ ಚಂದ್ರ ಅವರ ಎಡಕೈ ಮತ್ತು ಎಡಗಾಲಿಗೆ ಗಾಯವಾಗಿದೆ. ಬೈಕಿನಲ್ಲಿ ಹಿಂಬದಿ ಕುಳಿತಿದ್ದ ಫಯಾಜ್‌ ಎಂಬುವವರಿಗೂ ತಲೆ ಮತ್ತು ಎಡಕಾಲಿಗೆ ಗಾಯಗಳಾಗಿವೆ.

ಇದನ್ನೂ ಓದಿ : ಮನೆಕಳ್ಳತನಕ್ಕೆ ಬರುವುದಿಲ್ಲ ಎಂದಿದ್ದಕ್ಕೆ ಹಲ್ಲೆ !

ಬೈಕ್‌ ಸವಾರ ಮಹ್ಮದ್‌ ಮೀರಾ ವಿರುದ್ಧ ಗಾಯಾಳು ಚಂದ್ರ ಅವರ ಚಿಕ್ಕಪ್ಪನ ಮಗ ಕೇಶವ ಭೈರಾ ನಾಯ್ಕ ದೂರು ನೀಡಿದ್ದಾರೆ (Case Registered). ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು