ಭಟ್ಕಳ(Bhatkal): ಮಾನಸಿಕ ಸ್ಥಿಮಿತ ಕಳೆದುಕೊಂಡ (mentally imbalance) ಮಹಿಳೆಯೋರ್ವಳು ಇಲ್ಲಿನ ಸರ್ಕಲ್ಲಿನಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿ ರಂಪಾಟ (rampage) ನಡೆಸಿದ್ದು, ಮಹಿಳೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಬೆಳಗ್ಗಿನ ಸಮಯದಲ್ಲಿ ಶಾಲೆ-ಕಾಲೇಜು, ಕಚೇರಿಗೆ ತೆರಳುವ ತರಾತುರಿಯಲ್ಲಿದ್ದ ವಾಹನ ಸವಾರರು ಮಾನಸಿಕ ಸ್ಥಿಮಿತ ಕಳೆದುಕೊಂಡ ಮಹಿಳೆಯಿಂದ ತೊಂದರೆ ಅನುಭವಿಸಿದರು. ತರಾತುರಿಯಲ್ಲಿದ್ದ ವಾಹನ ಸವಾರರು ಟ್ರಾಫಿಕ್ ಜಾಮ್ ನಿಂದ ಸಮಯಕ್ಕೆ ನಿಗದಿತ ಸ್ಥಳಕ್ಕೆ ತೆರಳಲು ಪರದಾಡುವಂತಾಯಿತು. ರಸ್ತೆಯ ಬದಿಯಲ್ಲಿ ಸಾಗುತ್ತಿರುವ ಮಹಿಳೆ ಏಕಾಏಕಿ ಲಘು ಮತ್ತು ಘನ ವಾಹನದ ಎದುರು ಬಂದು ಚಾಲಕರಲ್ಲಿ ಭಯವನ್ನು ಉಂಟುಮಾಡುತ್ತಿದ್ದಳು (rampage).
ಇದನ್ನೂ ಓದಿ : ಬ್ರಹ್ಮಾನಂದ ಸರಸ್ವತಿ ಶ್ರೀಗಳ ಸೀಮೋಲ್ಲಂಘನ ನಾಳೆ
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮಹಿಳಾ ಪೊಲೀಸರು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಸರ್ಕಲ್ಲಿನಿಂದ ಸಾಗಹಾಕಿದ ಬಳಿಕ ತಲಾಂದ ರಸ್ತೆಯಲ್ಲೂ ಮಹಿಳೆಯ ವರ್ತನೆಯಿಂದ ಜನರು ಭೀತರಾಗಿದ್ದರು. ದೈಹಿಕವಾಗಿ ಪ್ರಬಲವಾಗಿದ್ದ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರಿಂದ ಸಾರ್ವಜನಿಕರು ಆಕೆಯ ಎದುರು ತಿರುಗಾಡಲು ಭಯಪಡುವಂತಾಗಿತ್ತು.
ಇದನ್ನೂ ಓದಿ : ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ
ಆಕೆಯನ್ನು ಹಿಡಿಯಲು ಹೋದ ಮಹಿಳಾ ಪೊಲೀಸರೊಂದಿಗೆ ತನ್ನ ಬಲದ ಪ್ರದರ್ಶನ ತೋರಿದ್ದಾಳೆ. ಬಳಿಕ ಸಾರ್ವಜನಿಕರ ಸಹಾಯದಿಂದ ಆಕೆಯನ್ನು ಹಿಡಿದು ಕಟ್ಟಿ ಅವರ ಮನೆಗೆ ಬಿಟ್ಟು ಬಂದಿದ್ದಾರೆ. ಮನೆಯ ಸದಸ್ಯರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಕೂಡಲೆ ಆಕೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ವಿದ್ಯಾಂಜಲಿ ಶಾಲೆಯಲ್ಲಿ ಗೋಕುಲಾಷ್ಟಮಿ ಸಂಭ್ರಮೋತ್ಸವ